ಮಲ್ಪೆ ಬೀಚ್ ನಲ್ಲಿ ಕೊಡಗಿನ ಯುವತಿ ನೀರುಪಾಲು

01/08/2021

ಮಡಿಕೇರಿ ಆ.1 : ಮಲ್ಪೆ ಬೀಚ್ ಗೆ ಪ್ರವಾಸಕ್ಕೆಂದು ತೆರಳಿದ್ದ ನಾಲ್ವರಲ್ಲಿ ಕೊಡಗಿನ ಯುವತಿಯೊಬ್ಬರು ನೀರುಪಾಲಾದ ಘಟನೆ ನಡೆದಿದೆ.
ಅಮ್ಮತ್ತಿ ಗ್ರಾಮದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ದಿವಂಗತ ಉದ್ದಪಂಡ ಜಗತ್ ಅವರ ಪುತ್ರಿ ದಶಮಿ (ದೇಚಮ್ಮ) ಎಂಬಾಕೆಯೇ ನೀರಿನಲ್ಲಿ ನಾಪತ್ತೆಯಾದ ದುರ್ದೈವಿ,
ಮೈಸೂರಿನ ನಿಖಿಲ್ (20), ಕೊಡಗಿನ ಶೈನಿ (20), ನವ್ಯಾ (19) ಹಾಗೂ ದೇಚಮ್ಮ (20) ಪ್ರವಾಸಕ್ಕೆಂದು ಮಲ್ಪೆ ಬೀಚ್ ಗೆ ತೆರಳಿದ್ದರು. ಈಜುವ ಸಂದರ್ಭ ನಾಲ್ವರೂ ಅಪಾಯಕ್ಕೆ ಸಿಲುಕಿದ್ದು, ಸ್ಥಳೀಯರು ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ದೇಚಮ್ಮ ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ನಿಖಿಲ್ ನನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.