ಆದಿ ದ್ರಾವಿಡ ಸಮಾಜ ಸೇವಾ ಸಂಘದಿಂದ ಸಂಘದ ಸದಸ್ಯರಿಗೆ ಹಾಗೂ ತುಳು ಬಾಂಧವರಿಗೆ ದಿನಸಿ ಕಿಟ್ ವಿತರಣೆ

02/08/2021

ಮಡಿಕೇರಿ ಆ.2 : ಕೋವಿಡ್‍ನಿಂದ ಗುಣಮುಖರಾಗಿ ಬಂದ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸದಸ್ಯರಿಗೆ ಹಾಗೂ ತುಳು ಬಾಂಧವರಿಗೆ ಸಂಘದ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.
ಗರ್ವಾಲೆ, ಮಾದಾಪುರ,ಬಿಳಿಗೇರಿ, ಹರದೂರು, ಗ್ರಾಮಗಳಿಗೆ ತೆರಳಿ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಹಾಗೂ ಗೌರವಧ್ಯಕ್ಷ ಬಾಬು ದಿನಸಿ ಕಿಟ್ ವಿತರಿಸಿದರು.
ಈ ಸಂದರ್ಭ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಮಾತನಾಡಿ, ಕೋವಿಡ್‍ನಿಂದ ಈಗಾಗಲೇ ಸಾಕಷ್ಟು ಮಂದಿ ಸಾವು-ನೋವುಗಳನ್ನು ಅನುಭವಿಸುತ್ತಿದ್ದು, ಹಲವರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪ್ರತಿಯೊಬ್ಬರು ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮೂಲಕ ಕೋವಿಡ್ ಮೂರನೇ ಅಲೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು.
ಪ್ರತಿಯೊಬ್ಬರು ಸರ್ಕಾರದ ನಿಯಮವನ್ನು ಪಾಲಿಸಬೇಕು ಮತ್ತು ಹೊರಗಿನಿಂದ ಬರುವವರೊಂದಿಗೆ ವ್ಯವಹರಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದರು.

ಸಂಘದ ಸದಸ್ಯ ಹೆಚ್.ಎಂ. ಕೃಷ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಹೆಚ್. ಎಸ್. ಮಧು, ಸುರಿಗಾಗಿ ಸಮಿತಿ ತಾಲ್ಲೂಕು ಅಧ್ಯಕ್ಷ ಅಣ್ಣಪ್ಪ,
ಸದಸ್ಯ ಎ. ಉಮೇಶ್ ಸೂರ್ಯ ಹಾಜರಿದ್ದರು.