ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧ ರಾಜ್ ಕುಮಾರ್ ಅಂತ್ಯ ಸಂಸ್ಕಾರ

05/08/2021

ಕಲಬುರಗಿ ಆ.5 : ಉಗ್ರರೊಂದಿಗೆ ನಡೆದ ಕಾದಾಟದಲ್ಲಿ ಹುತಾತ್ಮರಾದ ಕರ್ನಾಟಕದ ಬಿಎಸ್‌ಎಫ್ ಯೋಧ ರಾಜ್ ಕುಮಾರ್ ಎಂ.ಮವಿನ್ ಅವರ ಅಂತ್ಯಕ್ರಿಯೆ ಕಲಬುರಗಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ತ್ರಿಪುರಾದ ಧಲಾಯ್ ನಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದ ರಾಜ್ ಕುಮಾರ್ ಮಾವಿನ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್ ನ ವಿಮಾನ ನಿಲ್ದಾಣದ ಮೂಲಕ ಚಿಂಚನಸೂರು ಗ್ರಾಮಕ್ಕೆ ತರಲಾಗಿತ್ತು. ಕಲಬುರಗಿ-ಗ್ರಾಮೀಣ ಭಾಗದ ಶಾಸಕ ಬಸವರಾಜ ಮತ್ತಿಮಡು ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದರು.