ಖಾರ ಪ್ರಿಯರಿಗಾಗಿ ಪೆಪ್ಪರ್ ಚಿಕನ್

21/08/2021

ಬೇಕಾಗುವ ಸಾಮಾಗ್ರಿಗಳು : 1/2 ಕಿ.ಗ್ರಾಂ ಕೋಳಿ, 1 ಚಮಚ ಸಂಸ್ಕರಿಸಿದ ಎಣ್ಣೆ, 1 1/2 ಚಮಚ ಪುಡಿ ಮಾಡಿದ ಕರಿಮೆಣಸು, 2 – ಕತ್ತರಿಸಿದ ಈರುಳ್ಳಿ, 2 – ಕತ್ತರಿಸಿದ ಟೊಮೆಟೋ,3 – ಹಸಿಮೆಣಸಿನಕಾಯಿ, 1 ಚಮಚ ಶುಂಠಿ ಪೇಸ್ಟ್, 1 ಚಮಚ ಬೆೆಳ್ಳುಳ್ಳಿ ಪೇಸ್ಟ್.

ಮಾಡುವ ವಿಧಾನ :  ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಸೇರಿಸಿ, ಅದನ್ನು ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಈರುಳ್ಳಿಯನ್ನು ಸೇರಿಸಿ, ಹುರಿಯಿರಿ. ಈರುಳ್ಳಿ ಹೊಂಬಣ್ಣಕ್ಕೆ ಬಂದ ನಂತರ ಹೆಚ್ಚಿಕೊಂಡ ಟೊಮ್ಯಾಟೋ ಸೇರಿಸಿ, ಬೇಯಿಸಿ.  ಟೊಮ್ಯಾಟೋ ಚೆನ್ನಾಗಿ ಬೇಯಲು ಸ್ವಲ್ಪ ಉಪ್ಪನ್ನು ಸೇರಿಸಿ, 4-5 ನಿಮಿಷಗಳ ಕಾಲ ಬೇಯಿಸಿ. ಅದೇ ಬಾಣಲೆಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನಕಾಯಿ, ಕಾಳು ಮೆಣಸಿನ ಪುಡಿ ಮತ್ತು ಅರಿಶಿನ ಸೇರಿಸಿ. ಎಲ್ಲಾ ಪದಾರ್ಥಗಳು ಚೆನ್ನಾಗಿ ಬೆರೆಸಿ, 4-5 ನಿಮಿಷಗಳ ಕಾಲ ಬೇಯಿಸಿ. ಬಳಿಕ ಮುಚ್ಚಳವನ್ನು ಮುಚ್ಚಿ, ಕೋಳಿಯ ರಸವು ಬಹುತೇಕವಾಗಿ ಆವಿಯಾಗಿ, ಕೋಮಲವಾಗಿ ಬೇಯಲು ಬಿಡಬೇಕು.ರಸವು ಆರಿ, ಚೆನ್ನಾಗಿ ಬೆಂದ ಬಳಿಕ ಉರಿಯನ್ನು ಆರಿಸಿ.ಸಿದ್ಧವಾದ ಪೆಪ್ಪರ್ ಚಿಕನ್ ಅನ್ನು ಸೈಡ್ ಡಿಶ್ ಆಗಿ ಸವಿಯಲು ನೀಡಿ.