ಪರಿಸರ ಕರಡು 22 ಪ್ರಾದೇಶಿಕ ಭಾಷೆಗಳಿಗೆ ಅನುವಾದ : ಕೋರ್ಟ್‌ಗೆ ಕೇಂದ್ರ ಭರವಸೆ

28/08/2021

ಹೊಸದಿಲ್ಲಿ: ‘ಪರಿಸರ ಪ್ರಭಾವದ ಮೌಲ್ಯಮಾಪನ’ ಕರಡನ್ನು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಗುರುತಿಸಲ್ಪಟ್ಟ ಎಲ್ಲಾ 22 ಪ್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡಿ ಪ್ರಕಟಿಸುವುದಾಗಿ ಕೇಂದ್ರ ಸರಕಾರ  ದಿಲ್ಲಿ ಹೈಕೋರ್ಟ್‌ಗೆ ಭರವಸೆ ನೀಡಿದೆ.

ನ್ಯಾಯಮೂರ್ತಿಗಳಾದ ಡಿ.ಎನ್‌. ಪಾಟೀಲ್‌ ಮತ್ತು ಪ್ರತೀಕ್‌ ಜಲನ್‌ ಅವರಿದ್ದ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿತು. ”22 ಪ್ರಾದೇಶಿಕ ಭಾಷೆಗಳಲ್ಲಿ ಪರಿಸರ ಪರಿಣಾಮ ಮೌಲ್ಯಮಾಪನ ಕರಡನ್ನು ಪ್ರಕಟಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ನಾಲ್ಕು ವಾರ ಕಾಲಾವಕಾಶ ನೀಡಿದರೆ ಆ ಕೆಲಸ ಪೂರ್ಣಗೊಳ್ಳಲಿದೆ,” ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಚೇತನ್‌ ಶರ್ಮಾ ತಿಳಿಸಿದರು.