ಜೇನು ತುಪ್ಪದ ಔಷಧಿ ಗುಣಗಳು

04/09/2021

1. ಜೇನು ತುಪ್ಪ ಮೊದಲೇ ಪಚನವಾಗಿರುವ ಆಹಾರವಾದ್ದರಿಂದ ಜೀರ್ಣಕ್ರಿಯೆ ಸುಲಭ

2 ಜೇನು ತುಪ್ಪ ಶಕ್ತಿವರ್ಧಕ ಆಹಾರ ಒಂದು ಕೆ.ಜಿ ಜೇನು ತುಪ್ಪದಲ್ಲಿ 3500 ಕ್ಯಾಲೋರಿಗಳಷ್ಟು ಉಷ್ಣತೆ ದೊರೆಯುತ್ತದೆ.

3. ಹಸುಳೆಗಳಿಗೆ, ವಯಸ್ಸಾದವರಿಗೆ ಕಾಯಿಲಸ್ತರಿಗೆ ಸಕ್ಕರೆ ಬದಲಿ ಆಹಾರವಾಗಿ ಕೊಡಬಲ್ಲದು.

4. ಜೇನು ತುಪ್ಪದಲ್ಲಿ ಗ್ಲೂಕೋಸ್ ಸಕ್ಕರೆ (ಡೆಕ್ರೋಸ್) ಗಣನೀಯ ಪ್ರಮಾಣದಲ್ಲಿರುವುದರಿಂದ ಇದರ ಸೇವನೆಯಿಂದ ದೇಹಕ್ಕೆ ತಕ್ಷಣ ಶಕ್ತಿ ದೊರೆಯುತ್ತದೆ.

5. ಜೇನು ತುಪ್ಪದ ಸೇವನೆ ತಕ್ಷಣ ಆಯಾಸವನ್ನು ನೀಗಿಸಿ ಪುನಶ್ವೇತನವನ್ನುಂಟು ಮಾಡುತ್ತದೆ.

6. ನಿಶ್ಯಕ್ತಿಯನ್ನು ದೂರ ಮಾಡುತ್ತದೆ.

7. ಜೇನು ತುಪ್ಪದಲ್ಲಿ ಹೆಚ್ಚಿನಾಂಶದಲ್ಲಿರುವ ಸಕ್ಕರೆ ಇತರ ಎಲ್ಲಾ ಸಕ್ಕರೆಗಳಿಗಿಂತ ಸಿಹಿಯಾಗಿದ್ದು ಸುಲಭವಾಗಿ ಜೀರ್ಣವಾಗುತ್ತದೆ.

8. ಬಾಯಾರಿಕೆಯನ್ನು ನೀಗಿಸುತ್ತದೆ.

9. ಜೇನು ತುಪ್ಪಕ್ಕೆ ಇತರ ಆಹಾರ ವಸ್ತುಗಳನ್ನು ಕೆಡದಂತೆ ಉಳಿಸಿಕೊಳ್ಳುವ ಗುಣವಿದೆ.

10. ಜೇನು ತುಪ್ಪದ ಸೇವನೆ ಮೈ ಮತ್ತು ಮುಖದ ಕಾಂತಿಯನ್ನು ವೃದ್ಧಿಸುತ್ತದೆ.

ಔಷಧಿ ಗುಣಗಳು : ಜೇನು ತುಪ್ಪದ ಸೇವನೆ ಈ ಕೆಳಗಿನ ರೋಗಗಳನ್ನು ಉಪಶಮನಗೊಳಿಸುತ್ತದೆ.
ರಕ್ತದ ಒತ್ತಡ, ನ್ಯೂಮೋನಿಯ, ಟೈಫಾಯಿಡ್, ಶೀತ ಮತ್ತು ಕೆಮ್ಮು, ಕ್ಷಯ, ವಿಷಮಶೀತಜ್ವರ (ಎನ್ಪ್ಲೂ ಎಂಜಾ), ಗಂಟಲು ಬೇನೆ, ಸಿಡುಬುಶೀತಾಳಿ, ಮುಖ ಪೆಟ್ಟು ಮತ್ತು ಜಜ್ಜಿದ ಗಾಯ, ಮೂತ್ರ ಪಿಂಡ ರೋಗ, ಮಲಬದ್ಧತೆ, ಸುಟ್ಟಗಾಯ

ಉತ್ತಮ ಆರೋಗ್ಯ ಹಾಗೂ ಚೈತನ್ಯಕ್ಕಾಗಿ ಜೇನುತುಪ್ಪವನ್ನು ಬಳಸಬಹುದು.

ಪ್ರತಿ ದಿನ ಬೆಳಗ್ಗೆ ಒಂದು ಚಮಚ ಜೇನುತುಪ್ಪವನ್ನು ಬಳಸುವುದರಿಂದ

* ಬಿಸಿ ನೀರಿನಲ್ಲಿ ತೆಗೆದುಕೊಂಡರೆ ದೇಹದ ಹೆಚ್ಚಿನ ಕೊಬ್ಬಿನಾಂಶ ಕರಗುತ್ತದೆ.
* ಸುಂದರ ಮೈಕಟ್ಟಿಗಾಗಿ ನಿಂಬೆಹಣ್ಣಿನ ರಸದ ಜೊತೆ ಉಪಯೋಗಿಸಿರಿ.

* ನೆಗಡಿ, ಕೆಮ್ಮಿಗೆ ಕರಿಮೆಣಸಿನ ಪುಡಿಯೊಂದಿಗೆ ಉಪಯೋಗಿಸಿ.

* ಮುಖದ ಕಾಂತಿ ವರ್ಧನೆಗೆ / ಚರ್ಮದ ಹೊಳಪಿಗೆ ಜೇನುತುಪ್ಪ ಉಪಯೋಗಿಸಿ.

* ಉತ್ತಮ ಶಕ್ತಿವರ್ಧನೆಗೆ ಜೇನುತುಪ್ಪ ಉಪಯೋಗಿಸಿ.

* ಕ್ಯಾನ್ಸರ್ ಮುಂತಾದ ರೋಗ ನಿರೋಧಕ ಶಕ್ತಿಗಾಗಿ ಜೇನುತುಪ್ಪ ಉಪಯೋಗಿಸಿ,

ಜೇನುತುಪ್ಪದಲ್ಲಿ ಸಾಮಾನ್ಯವಾಗಿ ಈ ಕೆಳಗೆ ಸೂಚಿಸಿದ ದ್ರವಗಳಿರುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

1 ನೀರು ಶೇಕಡ 17%,

2. ಡೆಸ್ಟ್ರೋಸ್ ಸಕ್ಕರೆ ಶೇಕಡಾ 40.50%

3. ಲೆವಿಲೋಸ್ ಸಕ್ಕರೆ ಶೇ. 34%

4. ಸುಕ್ರೋಸ್ ಸಕ್ಕರೆ ಶೇಕಡಾ 1.00%

5. ಬೂದಿ ಪದಾರ್ಥಗಳಯ ಶೇ. 3.18%

6. ಅಂಟು ಪಾದರ್ಥಗಳು ಶೇ. 0.51%

7. ಆಮ್ಲಗಳು ಶೇ. 0.08%
8. ಸಾರಜನಕ ಪದಾರ್ಥಗಳು ಶೇ. 0.04%

ಪುಷ್ಪರಸ

(ಸಕ್ಕರೆ + ನೀರು)

ಸಾಮಾಗ್ರಿಗಳು
(ಇನ್ ವರ್ಟೇಸ್ + ಕಿಣ್ವ)

ಜೇನು ತುಪ್ಪ

(ಲೆವಿಲೊಸ್ + ಡೆಸ್ಟ್ರೋಸ್)