ಬಿಳಿ ಕೂದಲ ಸಮಸ್ಯೆಗೆ ಪರಿಹಾರ

07/09/2021

ಚಿಕ್ಕ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದನ್ನು ತಡೆಯಲು ಮನಸ್ಸು ಶಾಂತವಾಗಿರುವುದು ಮುಖ್ಯವಾಗಿದೆ. ಆಯುರ್ವೇದದ ಪ್ರಕಾರ, ಯಾವುದೇ ವ್ಯಕ್ತಿ ನಿರ್ದಿಷ್ಟ ವಯಸ್ಸಿಗೂ ಮುಂಚೆ ಕೂದಲು ಬಿಳಿಯಾಗುತ್ತಿದ್ದರೆ, ಆತನ ಕೂದಲನ್ನು ಮತ್ತೆ ಕಪ್ಪಾಗಿಸಬಹುದು. ಅದೂ ಕೂಡ ಯಾವುದೇ ರಾಸಾಯನಿಕ ಬಣ್ಣ ಬಳಸದೇ ಅತ್ಯಂತ ನೈಸರ್ಗಿಕ ರೀತಿಯಲ್ಲಿ.

ಮಾನಸಿಕ ಒತ್ತಡದಿಂದಾಗಿ ಕೂದಲು ಪ್ರೋಟೀನ್‌ಗಳಲ್ಲಿನ ಬದಲಾವಣೆಗಳು ಗೋಚರಿಸುತ್ತದೆ, ಇದು ಸಂಪೂರ್ಣ ಕಾರ್ಯವಿಧಾನವಾಗಿದೆ. ಒತ್ತಡವು ಕೂದಲು ಕಿರುಚೀಲಗಳ ಕಾಂಡಕೋಶಗಳಲ್ಲಿ ಕೆಲವು ಬದಲಾವಣೆಗಳನ್ನು ಉಂಟುಮಾಡುತ್ತದೆ, ಇದು ಕೂದಲಿನ ಬಣ್ಣದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.

ನೆಲ್ಲಿಕಾಯಿ :  ವಿಟಮಿನ್ ಸಿ ಅನ್ನು ಸಮೃದ್ಧವಾಗಿ ಪಡೆದುಕೊಂಡಿರುವ ನೈಸರ್ಗಿಕ ಉತ್ಪನ್ನ. ಇದು ಕೂದಲ ಆರೈಕೆಯಲ್ಲಿ ಅತ್ಯುತ್ತಮ ಪಾತ್ರವಹಿಸುತ್ತದೆ. ಇದರಿಂದ ಕೂದಲ ಆರೋಗ್ಯವನ್ನು ಸುಲಭವಾಗಿ ಕಾಪಾಡಬಹುದು. ಕೆಲವು ವಿಧಾನಗಳನ್ನು ಅನುಸರಿಸಿದರೆ ನಿಮ್ಮ ಬಿಳಿಕೂದಲು ಸಮಸ್ಯೆ ನಿವಾರಣೆಯಾಗುವುದು.

ತೆಂಗಿನ ಎಣ್ಣೆ :  ತೆಂಗಿನೆಣ್ಣೆ ಕೂದಲ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಕಪ್ಪು ಮತ್ತು ಹೊಳೆಯುವ ಕೂದಲು ನಿಮ್ಮದಾಗಬೇಕೆಂದರೆ ತೆಂಗಿನ ಎಣ್ಣೆಯ ಆರೈಕೆ ಮಾಡುವುದು ಉತ್ತಮ.

ಕರಿಬೇವು :  ಕರಿಬೇವು ಅದ್ಭುತ ಔಷಧೀಯ ಗುಣವನ್ನು ಒಳಗೊಂಡಿದೆ. ಇದು ಕೂದಲು ಉದುರುವುದು ಹಾಗೂ ಅದರ ಬಣ್ಣಗಳ ಸಂರಕ್ಷಣೆ ಮಾಡುವುದು.

ಮೆಹೆಂದಿ :  ಬಹಳ ತಂಪು ಹಾಗೂ ಸುಂದರ ಬಣ್ಣವನ್ನು ನೀಡುವ ನೈಸರ್ಗಿಕ ಉತ್ಪನ್ನ ಮೆಹೆಂದಿ. ಇದು ತಲೆಯಲ್ಲಿ ಇರುವ ಬಿಳಿಕೂದಲ ಬಣ್ಣವನ್ನು ಬದಲಿಸುವುದರ ಜೊತೆಗೆ ಬಿಳಿ ಕೂದಲು ಉಂಟಾಗುವುದನ್ನು ತಡೆಯುವುದು.