ರುಚಿರುಚಿಯಾದ ಜೀರಾ ರೈಸ್ ಮಾಡುವ ವಿಧಾನ

07/09/2021

ಬೇಕಾಗುವ ಸಾಮಾಗ್ರಿಗಳು :   ಅಗತ್ಯಕ್ಕೆ ತಕ್ಕಷ್ಟು ಅಕ್ಕಿ, ನೀರು, 4 – ಕತ್ತರಿಸಿದ ಹಸಿಮೆಣಸಿನಕಾಯಿ,  ಅಗತ್ಯಕ್ಕೆ ತಕ್ಕಷ್ಟು ಜೀರಿಗೆ,  1 ಚಮಚ  ತುಪ್ಪ.

ಮಾಡುವ ವಿಧಾನ : ಕುಕ್ಕರ್ ಅನ್ನು ಉರಿಯಲ್ಲಿ ಇಟ್ಟು, ಅದಕ್ಕೆ ಒಂದು ಟೇಬಲ್ ಚಮಚ ತುಪ್ಪವನ್ನು ಸೇರಿಸಿ.- ತುಪ್ಪ ಬಿಸಿಯಾದ ಬಳಿಕ ಜೀರಿಗೆ ಮತ್ತು ಹಸಿಮೆಣಸಿನ ಕಾಯನ್ನು ಸೆರಿಸಿ.- ಜೀರಿಗೆ ಮತ್ತು ಹಸಿಮೆಣಸು ಚೆನ್ನಾಗಿ ಹುರಿದ ನಂತರ ತೊಳೆದುಕೊಂಡ ಅಕ್ಕಿಯನ್ನು ಸೇರಿಸಿ.- ಬಳಿಕ ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ, ಒಂದು ನಿಮಿಷಗಳ ಕಾಲ ಕೈಯಾಡಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ, ನೀರನ್ನು ಬೆರೆಸಿ. ಕುಕ್ಕರ್ ಮೂರು ಸೀಟಿ ಕೂಗಲು ಬಿಡಬೇಕು. ನಂತರ ಉರಿಯನ್ನು ಆರಿಸಿ, ಒಂದೆಡೆ ಬಿಸಿ ತಣಿಯಲು ಬಿಡಿ. ಸಣ್ಣ ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಬಿಸಿ ಮಾಡಿ. – ಬಿಸಿಯಾದ ತುಪ್ಪಕ್ಕೆ ಗೋಡಂಬಿ ಹಾಕಿ, ಹೊಂಬಣ್ಣ ಬರುವ ತನಕ ಹುರಿಯಿರಿ.  ಬೇಯಿಸಿಕೊಂಡ ಜೀರಾ ಅನ್ನಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಬೆರೆಸಿ, ಅಲಂಕರಿಸಿ.  ರುಚಿಕರವಾದ ಬಿಸಿ ಬಿಸಿ ಜೀರಿಗೆ ಅನ್ನಕ್ಕೆ ನಿಮ್ಮ ಆಯ್ಕೆಯ ಗ್ರೇವಿಯನ್ನು ಸೇರಿಸಿ ಸವಿಯಬಹುದು.