ಬಟ್ಟೆ ಒಗೆಯಲೆಂದು ಹೋಗಿದ್ದ ಮಹಿಳೆ ಮತ್ತೆ ಬರಲಿಲ್ಲ : ಶವಕ್ಕಾಗಿ ತೀವ್ರ ಶೋಧ

13/09/2021

ಮಡಿಕೇರಿ ಸೆ.13 : ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ಮಹಿಳೆ ನಾಪತ್ತೆಯಾದ ಘಟನೆ ಅರಂತೋಡು ಗ್ರಾಮದಲ್ಲಿ ನಡೆದಿದೆ.
ಸಣ್ಣಮನೆಯ ಮಾಧವ ಅವರ ಪತ್ನಿ ಮೀನಾಕ್ಷಿ ಎಂಬುವವರು ಸಂಜೆ ಅರಂತೋಡಿನ ಮಾಡದಕಾನ ಹೊಳೆಗೆ ಬಟ್ಟೆ ಒಗೆಯಲೆಂದು ಹೋದವರು ಮರಳಿ ಮನೆಗೆ ಬರಲಿಲ್ಲ.
ರಾತ್ರಿಯಿಂದ ಅರಂತೋಡು ಗ್ರಾಮಸ್ಥರು ಹುಡುಕಿದರೂ ಮಹಿಳೆ ಪತ್ತೆಯಾಗಲಿಲ್ಲ. ಮರುದಿನ ಸುಳ್ಯ ಅಗ್ನಿ ಶಾಮಕದಳ ಹುಡುಕಾಟ ಆರಂಭಿಸಿದ್ದು, ಇಲ್ಲಿಯವರೆಗೆ ಮಹಿಳೆಯ ಮೃತ ದೇಹ ಪತ್ತೆಯಾಗಿಲ್ಲ.