ಆನೆಕಾಡು ಬಳಿ ಸರಣಿ ಅಪಘಾತ

13/09/2021

ಮಡಿಕೇರಿ ಸೆ.13 : ಕುಶಾಲನಗರದ ಆನೆಕಾಡು ಬಳಿ ಸರಣಿ ಅಪಘಾತ ನಡೆದಿದೆ. ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ಲುವ ಸಂದರ್ಭ ಹಿಂಬದಿಯಲ್ಲಿದ್ದ ಸ್ವಿಫ್ಟ್ ಕಾರು ನಿಧಾನವಾಗಿ ಚಲಿಸಲು ಆರಂಭಿಸಿದೆ. ಈ ಕಾರಿನ ಹಿಂಬದಿಯಲ್ಲಿದ್ದ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ವಿಫ್ಟ್ ಬಸ್ಸಿಗೆ ಡಿಕ್ಕಿಯಾಗಿದೆ.
ಸೀಟ್ ಬೆಲ್ಟ್ ಹಾಕಿದ್ದರಿಂದ ಮತ್ತು ಏರ್ ಬ್ಯಾಗ್ ತೆರೆದುಕೊಂಡದ್ದರಿಂದ ಕಾರಿನಲ್ಲಿದ್ದವರು ಸಣ್ಣ, ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಆದರೆ ಕಾರು ಜಖಂಗೊಂಡಿದೆ.
ಸ್ವಿಫ್ಟ್ ಕಾರು ನಂದಿಮೊಟ್ಟೆ ನಿವಾಸಿ ಮೂಸ ಎಂಬುವವರಿಗೆ ಸೇರಿದ್ದಾಗಿದೆ.