ಕಾಗಡಿಕಟ್ಟೆ ಗ್ರಾಮದಲ್ಲಿ ಅಕ್ರಮ ಜೂಜಾಟ : ನಗದು ಸಹಿತ ನಾಲ್ವರ ಬಂಧನ

14/09/2021

ಮಡಿಕೇರಿ ಸೆ.14 : ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಗಡಿಕಟ್ಟೆ ಗ್ರಾಮದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಅಡ್ಡೆಯಮೇಲೆ ದಾಳಿ ನಡೆಸಿದ ಸೋಮವಾರಪೇಟೆ ಪೊಲೀಸರು, ನಾಲ್ವರು ಜೂಜು ಕೋರರನ್ನು ವಶಕ್ಕೆ ಪಡೆದಿದ್ದಾರೆ.
ಕಾಗಡಿಕಟ್ಟೆ ಗ್ರಾಮದ ರಸ್ತೆ ಬದಿಯಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಕರ್ಕಳ್ಳಿ ಗ್ರಾಮದ ಬಿ.ಆರ್. ಸಂಜಯ್, ಪಟ್ಟಣದ ಗೌಡ ಸಮಾಜ ರಸ್ತೆಯ ಕೆ.ಪಿ. ನಿಲಯ್, ದೊಡ್ಡಹಣಕೋಡು ಗ್ರಾಮದ ಎಂ.ಬಿ. ಮಹಮ್ಮದ್, ದೊಡ್ಡಮಳ್ತೆಯ ಡಿ.ಎಂ. ರವಿ ಅವರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಜೂನಾಟಕ್ಕೆ ಪಣವಾಗಿ ಇಟ್ಟಿದ್ದ 14,050 ನಗದನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಇನ್ಸ್‍ಪೆಕ್ಟರ್ ಬಿ.ಜಿ. ಮಹೇಶ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಎಂ.ಸಿ. ಶ್ರೀಧರ್, ಸಿಬ್ಬಂದಿಗಳಾದ ಶಿವಕುಮಾರ್, ಬಸಪ್ಪ, ಮಹಮ್ಮದ್ ಘನಿ, ತೀರ್ಥೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.