ಅಕ್ರಮ ಶ್ರೀಗಂಧದ ಮರ ಸಾಗಾಟಕ್ಕೆ ಯತ್ನ : ಆರೋಪಿ ಬಂಧನ

14/09/2021

ಮಡಿಕೇರಿ ಸೆ.14 : ಶ್ರೀಗಂಧದ ಮರವನ್ನು ಅಕ್ರಮವಾಗಿ ಕಡಿದು ಸಾಗಾಟಗೊಳಿಸುತ್ತಿದ್ದ ಆರೋಪಿಯನ್ನು ಜಿಲ್ಲಾ ಪೊಲೀಸ್ ಫಾರೆಸ್ಟ್ ಸ್ಕ್ವಾಡ್‍ನ ಅಧಿಕಾರಿಗಳು ಕಾರ್ಯಾಚಣೆ ನಡೆಸಿ ಬಂಧಿಸಿದ್ದಾರೆ.
ತಾಲೂಕಿನ ಆಲೂರು ಸಿದ್ದಾಪುರದ ಹಿತ್ಲಗದ್ದೆಯ ಸುಜಯ್ ಎಂಬಾತ ತನ್ನ ಮೋಟಾರ್ ಬೈಕ್‍ನಲ್ಲಿ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ 20 ಕೆ.ಜಿ.ಯಷ್ಟು ಶ್ರೀಗಂಧವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ಧಾಳಿ ನಡೆಸಿದ ಪೊಲೀಸರು ಫಾರೆಸ್ಟ್ ಸ್ಕ್ವಾಡ್‍ನ ಸಿಬ್ಬಂದಿಗಳು, ಗೋಣಿಮರೂರು ಬಳಿಯಲ್ಲಿ ಮಾಲು ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ಫಾರೆಸ್ಟ್ ಸ್ಕ್ವಾಡ್‍ನ ವರಿಷ್ಠಾಧಿಕಾರಿ ಸುರೇಶ್‍ಬಾಬು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್.ಐ ಅಪ್ಪಾಜಿ, ಸಿಬ್ಬಂದಿಗಳಾದ ಶೇಖರ್, ರಾಘವೇಂದ್ರ, ಯೋಗೇಶ್, ಮೋಹನ್ ಸೇರಿದಂತೆ ಇತರರು ಭಾಗವಹಿಸಿದ್ದರು.