ಹೆಲಿ ಟೂರಿಸಂ ವ್ಯಾಪ್ತಿಗೆ ಕೊಡಗು ಜಿಲ್ಲೆ

14/09/2021

ಮಡಿಕೇರಿ ಸೆ.14 : ಪ್ರಕೃತಿ ಸೌಂದರ್ಯದ ಮೂಲಕ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಕೊಡಗು ಜಿಲ್ಲೆಯನ್ನು ಹೆಲಿ ಟೂರಿಸಂ ವ್ಯಾಪ್ತಿಗೆ ಒಳಪಡಿಸಬೇಕೆನ್ನುವ ಪ್ರಸ್ತಾಪವಿದೆ. ಈ ಬಗ್ಗೆ ಸಮಾಲೋಚಕರ ಸೇವೆಯನ್ನು ಪಡೆಯಲು ನಿರ್ವಾಹಕರನ್ನು ಆಯ್ಕೆ ಮಾಡುವ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಾಂತೆಯAಡ ವೀಣಾಅಚ್ಚಯ್ಯ ಅವರು ಹೆಲಿ ಟೂರಿಸಂ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಪ್ರವಾಸೋದ್ಯಮ ಇಲಾಖೆ ಕಾರ್ಯ ನಿರ್ವಹಿಸುತ್ತಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನು ಕರ್ನಾಟಕದತ್ತ ಸೆಳೆಯಲು ಪ್ರಮುಖ ಪ್ರವಾಸಿತಾಣಗಳಲ್ಲಿ ಹೆಲಿ ಟೂರಿಸಂ ನ್ನು ಅನುಷ್ಠಾನಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಪುಸ್ತುತ ಪ್ರವಾಸಿತಾಣಗಳಿಗೆ ಭೇಟಿ ನೀಡಲು ಪ್ರವಾಸಿಗರಿಗೆ ಅನುಕೂಲವಾಗುವಂತೆ ಕರಡು “ಹೆಲಿ ಟೂರಿಸಂ ಸರ್ಕ್ಯೂಟ್” ನ್ನು ಸಿದ್ಧಪಡಿಸಲಾಗುತ್ತಿದೆ. ಈ ಕರಡು ಸರ್ಕ್ಯೂಟ್ ನಲ್ಲಿ ಕೊಡಗು ಜಿಲ್ಲೆಯನ್ನು ಸಹ ಸೇರ್ಪಡೆಗೊಳಿಸಲು ಪುಸ್ತಾವನೆ ಇದ್ದು, ಸಮಾಲೋಚಕ ಸೇವೆಯನ್ನು ಪಡೆಯಲು ನಿರ್ವಾಹಕರನ್ನು ಆಯ್ಕೆ ಮಾಡುವ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಆನಂದ್ ಸಿಂಗ್ ತಿಳಿಸಿದರು.