ಸೆ.22 ರಂದು ಡಾ.ಜೆ ಸೋಮಣ್ಣ ರಚಿತ ನಾಲ್ಕು ಪುಸ್ತಕಗಳ ಅನಾವರಣ

14/09/2021

ಮಡಿಕೇರಿ ಸೆ.14 : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಸೆ.22 ರಂದು ಡಾ.ಜೆ. ಸೋಮಣ್ಣ ಅವರ ನಾಲ್ಕು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ.
ಅಂದು ಮಧ್ಯಾಹ್ನ 2.30ಕ್ಕೆ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಮಾಜಿ ಸಚಿವ ಎಂ.ಸಿ. ನಾಣಯ್ಯ “ಮೌನ ಕಣಿವೆಯ ಸಂತ”, ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ “ಅಶ್ವತ್ಥರ ಕಥಾ ಸಾಹಿತ್ಯ”, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ “ಗಿರಿಸೀಮೆಯ ಹಾಡುಪಾಡು”, ಹಿರಿಯ ವಕೀಲ ಕೆ.ಆರ್. ವಿದ್ಯಾಧರ “ಕನ್ನಡ ಸಾಹಿತ್ಯಕ್ಕೆ ಕೊಡಗಿನ ಕೊಡುಗೆ” ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ.
ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್‍ಎನ್‍ಡಿಪಿ ಕೊಡಗು ಯೂನಿಯನ್‍ನ ಅಧ್ಯಕ್ಷ ವಿ.ಕೆ. ಲೋಕೇಶ್ ಪಾಲ್ಗೊಳ್ಳಲಿದ್ದು, ಭಾವಗೀತಾ ಗಾಯನ ಕಾರ್ಯಕ್ರಮ ನಡೆಯಲಿದೆ.