ಕೊಡಗಿನಲ್ಲಿ “ಡೆಲ್ಟಾ-ಎ4” ವೈರಸ್ ಪತ್ತೆ : ಆರೋಗ್ಯಾಧಿಕಾರಿಗಳು ಹೀಗೆ ಹೇಳಿದ್ದಾರೆ…

15/09/2021

ಮಡಿಕೇರಿ ಸೆ.15 : ಕೊಡಗು ಜಿಲ್ಲೆಯಲ್ಲಿ ಇದೀಗ ಕೋವಿಡ್-19 ಸೋಂಕಿನ ರೂಪಾಂತರಿ ತಳಿ ಎಂದು ಹೇಳಲಾಗುತ್ತಿರುವ “ಡೆಲ್ಟಾ-ಎ4” ವೈರಸ್ ಪತ್ತೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಈವರೆಗೆ ಒಟ್ಟು 19 “ಡೆಲ್ಟಾ-ಎ4” ಪ್ರಕರಣಗಳು ವರದಿಯಾಗಿದೆ. ಈ ‘ಡೆಲ್ಟಾ’ ಕೇಸ್ ಕೋವಿಡ್ ವೈರಸ್‌ನ ಒಂದು ಬಗೆಯ ಪ್ರಬೇಧ ಎಂದು ಹೇಳಲಾಗುತ್ತಿದ್ದು, ಇದನ್ನು “ ಡೆಲ್ಟಾ-ಎ4” ಎಂದು ಗುರುತಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಮೇ ತಿಂಗಳಿನಿAದ ಒಟ್ಟು 67 ಕೋವಿಡ್ ಪಾಸಿಟೀವ್ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಜುಲೈವರೆಗೆ 16 ಹೊಸ ತಳಿಗಳು ಪತ್ತೆಯಾಗಿದ್ದರೆ, ಆಗಸ್ಟ್ನಿಂದ ಸೆ.15ರವರೆಗೆ ಜಿಲ್ಲೆಯಲ್ಲಿ ಒಟ್ಟು 19 ‘ಡೆಲ್ಟಾ-ಎ4’ ಪ್ರಕರಣಗಳು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಈ ವೈರಸ್ ಕಂಡು ಬಂದವರನ್ನು ಮೊಬೈಲ್ ನಂಬರ್‌ಗಳ ಆಧಾರದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ.ವೆಂಕಟೇಶ್ ಮಾಹಿತಿ ನೀಡಿದರು.
ಈಗ ಪತ್ತೆಯಾಗಿರುವ ‘ಡೆಲ್ಟಾ-ಎ4’ ಬೇರೆ ವೈರಸ್‌ನಂತೆ ಅಪಾಯಕಾರಿ ಅಲ್ಲ. ರೂಪಾಂತರಿ ಆಗಿರುವುದರಿಂದ ರಾಜ್ಯದ ಎಲ್ಲಾ ಭಾಗಗಳಲ್ಲೂ ಅದು ಸಾಮಾನ್ಯವಾಗಿ ಪತ್ತೆಯಾಗುತ್ತವೆ. ಸಾರ್ವಜನಿಕರು ಯಾವುದೇ ರೀತಿಯಲ್ಲೂ ಆತಂಕಪಡುವ ಅಗತ್ಯವಿಲ್ಲ ಎಂದು ವೆಂಕಟೇಶ್ ಹೇಳಿದರು. ಡೆಲ್ಟಾ-ಎ4 ರೂಪಾಂತರಿ ಕೋವಿಡ್ ವೈರಸ್‌ನ ಒಂದು ಪ್ರಬೇಧವಾಗಿರುವ ಕಾರಣ ಸೋಂಕಿತರಿಗೆ ಕೋವಿಡ್ ಮಾದರಿಯಲ್ಲೇ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಈ ಡೆಲ್ಟಾ-ಎ4 ಹಾಗೂ ಕೋವಿಡ್-19 3ನೇ ಅಲೆಗೂ ಯಾವುದೇ ಸಂಬAಧವಿಲ್ಲ ಎಂದೂ ಡಾ.ವೆಂಕಟೇಶ್ ಸ್ಪಷ್ಟಪಡಿಸಿದರು. ಕೋವಿಡ್ 3ನೇ ಅಲೆಗೆ ಸಂಬoಧಿಸಿದoತೆ ಜಿಲ್ಲಾ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಮಕ್ಕಳ ಮೇಲೆ 3ನೇ ಅಲೆ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಎಲ್ಲಾ ಸಿದ್ದತೆಗಳನ್ನು ಜಿಲ್ಲಾಡಳಿತದ ಆದೇಶದಂತೆ ಈಗಾಗಲೇ ಕೈಗೊಳ್ಳಲಾಗಿದೆ. ನೆರೆಯ ಕೇರಳ ರಾಜ್ಯದಲ್ಲಿ ಪತ್ತೆಯಾಗಿರುವ ನಿಫಾ ವೈರಸ್ ಸೋಂಕು ಪ್ರಕರಣ ಕೊಡಗು ಜಿಲ್ಲೆಯಲ್ಲಿ ಇಂದಿನವರೆಗು ಕಂಡು ಬಂದಿಲ್ಲ ಎಂದು ಡಾ.ವೆಂಕಟೇಶ್ ಮಾಹಿತಿ ನೀಡಿದರು.
::: ಮೆಗಾ ಲಸಿಕೆ ಅಭಿಯಾನ :::
ಕೊಡಗು ಜಿಲ್ಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಸೆ.17ರಂದು ಮೆಗಾ ಕೋವಿಡ್ ಲಸಿಕೆ ಅಭಿಯಾನ ನಡೆಯಲಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ಲಸಿಕೆ ಸಂಗ್ರಹ ಸೇರಿದಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಡಾ.ವೆಂಕಟೇಶ್ ಹೇಳಿದರು. ಕೊಡಗು ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಲಸಿಕೆ ನೀಡುವ ಗುರಿಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 55 ಸಾವಿರ ಮಂದಿ ಲಸಿಕೆ ತೆಗೆದುಕೊಳ್ಳಲು ಬಾಕಿ ಉಳಿದಿದ್ದಾರೆ. ಮೊದಲ ಹಂತವಾಗಿ ಸೆ.17ರಂದು ಒಟ್ಟು 30 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಎರಡನೇ ಹಂತವಾಗಿ ಇನ್ನುಳಿದ 20 ಸಾವಿರಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗುತ್ತದೆ ಎಂದು ಡಾ. ವೆಂಕಟೇಶ್ ಮಾಹಿತಿ ನೀಡಿದರು.
*****
ಪ್ರತಿಯೊಬ್ಬರು ಕೂಡ ಮೊದಲ ಹಾಗೂ 2ನೇ ಕೋವಿಡ್ ಲಸಿಕೆಯನ್ನು ಪಡೆಯಬೇಕು. ಇದರಿಂದ ಸೋಂಕಿನಿoದ ಪಾರಾಗಬಹುದು. ಲಸಿಕೆ ಪಡೆದವರಲ್ಲೂ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಆದರೆ ಲಸಿಕೆ ಪಡೆದವರು ಕೋವಿಡ್‌ನಿಂದ ಮೃತಪಟ್ಟ ಪ್ರಕರಣಗಳಿಲ್ಲ. ಸಾಮಾಜಿಕ ಅಂತರ, ಮಾಸ್ಕ್ ತೊಡುವುದು, ಸ್ಯಾನಿಟೈಸರ್ ಬಳಕೆಯಿಂದ ಸಾರ್ವಜನಿಕರು ವಿಮುಖರಾಗಬಾರದು.
ಡಾ.ವೆಂಕಟೇಶ್
ಕೊಡಗು ಡಿಹೆಚ್‌ಓ.
*****