Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
11:26 PM Tuesday 26-October 2021

ಕಳತ್ಮಾಡು ವಿಕಲಚೇತನ ಹತ್ಯೆ ಪ್ರಕರಣ : ಮೂವರ ಬಂಧನ : ಉಸಿರುಗಟ್ಟಿಸಿ ಮರ್ಮಾಂಗಕ್ಕೆ ಒದ್ದರು…

17/09/2021

ಮಡಿಕೇರಿ ಸೆ.17 : ವಿರಾಜಪೇಟೆ ತಾಲೂಕಿನ ಕಳತ್ಮಾಡು ಗ್ರಾಮದಲ್ಲಿ ಸೆ.9ರಂದು ವಿಕಲಚೇತನ ವ್ಯಕ್ತಿಯ ಹತ್ಯೆ ನಡೆದ ಪ್ರಕರಣಕ್ಕೆ ಸಂಬoಧಿಸಿದoತೆ ಮೂವರು ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಕಳತ್ಮಾಡು ಗ್ರಾಮ ನಿವಾಸಿ ಬಿ.ಎಸ್.ಸಂದೀಪ್, ಬಿ.ಜೆ.ಸುಂದರ ಹಾಗೂ ಗೋಣಿಕೊಪ್ಪದ ಮೊಹಮ್ಮದ್ ಸುಲೈಮಾನ್ ಬಂಧಿತ ಆರೋಪಿಗಳಾಗಿದ್ದಾರೆ.
ಸೆ.9ರಂದು ಕಳತ್ಮಾಡು ಗ್ರಾಮದಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ವಿಕಲಚೇತನ ವ್ಯಕ್ತಿ ಬಿ.ಜಿ.ಉದಯಶಂಕರ್ ಎಂಬವರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತಲ್ಲದೇ, ಆಸ್ತಿ ವಿಚಾರಕ್ಕೆ ಈ ಕೃತ್ಯ ಎಸಗಲಾಗಿದೆ ಎಂಬ ಶಂಕೆ ವ್ಯಕ್ತಗೊಂಡಿತ್ತು.
ಈ ಕುರಿತು ತನಿಖೆ ನಡೆಸಿದ ಸಿದ್ದಾಪುರ ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಈ ಸಂದರ್ಭ ಆರೋಪಿಗಳು ಬಿ.ಜಿ.ಉದಯಶಂಕರ್ ಅವರನ್ನು ಸೆ.9ರ ರಾತ್ರಿ ಅವರ ಮನೆಯಿಂದ ಕಾರಿನಲ್ಲಿ ಅಪಹರಿಸಿ ಗೋಣಿಕೊಪ್ಪಲು ಪಂಚವಳ್ಳಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೆಡ್‌ಶೀಟ್‌ನಿಂದ ಉಸಿರುಗಟ್ಟಿಸಿ, ಮರ್ಮಾಂಗಕ್ಕೆ ಒದ್ದು, ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ತದನಂತರ ಉದಯ ಶಂಕರ್ ಅವರ ಮನೆಯಲ್ಲಿ ಮೃತದೇಹ ಇಟ್ಟು ಸ್ಥಳದಿಂದ ಪರಾರಿಯಾಗಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವೃತ್ತನಿರೀಕ್ಷಕ ವೆಂಕಟೇಶ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್, ಎಎಸ್‌ಐ ತಮ್ಮಯ್ಯ, ಸಿಬ್ಬಂದಿಗಳಾದ ರತನ್, ವಸಂತ್ ಕುಮಾರ್, ಮಲ್ಲಪ್ಪ ಮುಶಿಗೇರ, ಲಕ್ಷೀಕಾಂತ್, ಗೋವರ್ಧನ್, ಕಿರಣ್, ಚರ್ಮಣ್ಣ, ರಾಜೇಶ್ ಮತ್ತು ಗಿರೀಶ್ ಅವರು ಪಾಲ್ಗೊಂಡಿದ್ದರು.