ಶಕ್ತಿಧಾಮದ ಹಿರಿಯ ಜೀವಿಗಳಿಗೆ ಇನ್ನರ್ ವೀಲ್ ನಿಂದ ಕೊಡುಗೆ

21/09/2021

ಮಡಿಕೇರಿ ಸೆ.21 : ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ವತಿಯಿಂದ ನಗರದ ಶಕ್ತಿಧಾಮ ಸಂಸ್ಥೆಯಲ್ಲಿನ ಹಿರಿಯ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ನೀಡಲಾಯಿತು.

ನಗರದ ಶಕ್ತಿಧಾಮ ಸಂಸ್ಥೆಯಲ್ಲಿ ಆಶ್ರಯ ಪಡೆದ ಹಿರಿಯ ಜೀವಿಗಳಿಗೆ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ದೈನಂದಿನ ಅಗತ್ಯತೆಯ ವಸ್ತುಗಳಿರುವ ಕಿಟ್ ಗಳನ್ನು ನೀಡಲಾಯಿತಲ್ಲದೇ ಮಾಸ್ಕ್ ಗಳನ್ನೂ ವಿತರಿಸಲಾಯಿತು.

ಇನ್ನರ್ ವೀಲ್ ಅಧ್ಯಕ್ಷೆ ಶಪಾಲಿ ರೈ, ಕಾಯ೯ದಶಿ೯ ಶಮ್ಮಿ ಪ್ರಭು, ನಿದೇ೯ಶಕರಾದ ರೂಪಾಸುಮಂತ್, ಪ್ರಿಯಪ್ರಶಾಂತ್ ಹಾಜರಿದ್ದರು.