Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
12:28 AM Tuesday 26-October 2021

ವಿವಿಧ ವೈಶಿಷ್ಟತೆಗಳಿಂದ ಗುರುತಿಸಿಕೊಂಡಿರುವ “ಉತ್ಸವ ರಾಕ್ ಗಾರ್ಡನ್‌”

21/09/2021

ತನ್ನದೇ ಆದ ವೈಶಿಷ್ಟ್ಯತೆಗಳಿಂದ ಗುರುತಿಸಿಕೊಂಡಿರುವ ಉತ್ಸವ ರಾಕ್ ಗಾರ್ಡನ್‌ ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲೊಂದು. ಇದು ಹಾವೇರಿಜಿಲ್ಲೆ ಶಿಗ್ಗಾಂವ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿದ್ದು ಎಂಟು ವಿಶ್ವದಾಖಲೆಗಳಲ್ಲಿ ಹೆಸರಿಸಲ್ಪಟ್ಟು ನಾಡಿನ ಹೆಮ್ಮೆ ಎನಿಸಿಕೊಂಡಿದೆ.

ಹಾವೇರಿ ಜಿಲ್ಲೆಯ ಹಾವೇರಿ ಪಟ್ಟಣದಿಂದ ವಾಯವ್ಯ ದಿಕ್ಕಿಗೆ 30 ಕಿ.ಮೀ ಚಲಿಸಿದರೆ ಸಿಗುವ ಪಟ್ಟಣ ಶಿಗ್ಗಾಂವ್. ಇಲ್ಲಿಂದ ಮತ್ತೆ ವಾಯವ್ಯ ದಿಕ್ಕಿಗೆ ಸುಮಾರು 10 ಕಿ.ಮೀ ಕ್ರಮಿಸಿದರೆ ಗೊಟಗೋಡಿ ಎಂಬ ಹಳ್ಳಿಯ ಸರಹದ್ದಿನಲ್ಲಿರುವ ಉತ್ಸವ ರಾಕ್ ಗಾರ್ಡನ್ ಸಿಗುತ್ತದೆ.

ಹಳ್ಳಿಯ ಸಮಗ್ರ ಜೀವನದ ಚಿತ್ರಣವನ್ನು ಮಾದರಿ ಪ್ರತಿಮೆಗಳ ಮೂಲಕ ಸುಂದರವಾಗಿ ಇಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಸುಂದರವಾದ ಉದ್ಯಾನವನವನ್ನೂ ಸಹ ಇಲ್ಲಿ ಕಾಣಬಹುದು. ಹುಬ್ಬಳ್ಳಿ ಹಾಗೂ ಹಾವೇರಿಗಳಿಂದ ಗೊಟಗೋಡಿಯವರೆಗೆ ಬಸ್ಸುಗಳು ಸುಲಭವಾಗಿ ದೊರೆಯುತ್ತವೆ.

ಉತ್ತರ ಕರ್ನಾಟಕದ ಹಿಂದಿನ ಗ್ರಾಮ ಸಾಮ್ರಾಜ್ಯಎಲ್ಲರನ್ನುಆಕರ್ಷಿಸುತ್ತದೆ. ಇಲ್ಲಿ ಕೆಲಸದಲ್ಲಿ ತೊಡಗಿದ ಹೆಂಗಸರು, ಗಂಡಸರು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುತ್ತಾರೆ. ಇಲ್ಲಿಯ ಶಿಲ್ಪಗಳು, ಅವುಗಳಿಗೆ ಪೂರಕವಾಗುವಂತೆ ಜೋಡಿಸಿದ ಸುತ್ತಲಿನ ದಿನಬಳಕೆಯ ಗ್ರಾಮ್ಯ ಸಾಮಾಗ್ರಿಗಳು, ಮನೆಗಳ ಮಾದರಿಗಳು ಇತ್ಯಾದಿ. ದೃಶ್ಯಗಳು ಹಿಂದಿನ ಗ್ರಾಮ ಸಾಮ್ರಾಜ್ಯದ ಸೊಬಗನ್ನು ನೆನಪಿಸುತ್ತವೆ.

ಸಾಂಪ್ರದಾಯಿಕ ಕೃಷಿ ಪದ್ಧತಿಯ ಹಂತಗಳು, ಹೈನುಗಾರಿಕೆ, ಆಡು, ಕುರಿ ಸಾಕಣೆ, ಬುಡಕಟ್ಟು ಜನಾಂಗದ ಬದುಕು, ಸಾಕು ಪ್ರಾಣಿ, ಕಾಡು ಪ್ರಾಣಿಗಳು, ವಿವಿಧ ತಳಿಯ ಆಕಳು ಎಮ್ಮೆಯ ತಳಿಗಳು, ಜನಪದರ ಆಟ,ಸಾರಿಗೆ ವ್ಯವಸ್ಥೆ ಹೀಗೆ ಇನ್ನು ಹಲವಾರು ಸಂಗತಿಗಳನ್ನು ಶಿಲ್ಪಗಳ ಮೂಲಕ ಅವುಗಳೊಂದಿಗೆ ಸುವ್ಯವಸ್ಥಿತ ವಾಗಿ ಸಮ್ಮಿಲನಗೊಂಡ ನಿಸರ್ಗದ ಮೂಲಕ ಕಣ್ಣು ತುಂಬಿಕೊಳ್ಳಬೇಕಾದರೆ ‘ಉತ್ಸವ ರಾಕ್‌ಗಾರ್ಡನ್’ಗೆ ಒಮ್ಮೆ ಭೇಟಿ ನೀಡಲೇಬೇಕು.

ನಮ್ಮ ನಾಡಿನ ಗ್ರಾಮೀಣ ಸಂಸ್ಕೃತಿಯ ಮಜಲುಗಳನ್ನೆಲ್ಲಾ ಸಾವಿರಾರು ಶಿಲ್ಪಗಳಲ್ಲಿ ಹಿಡಿದಿಟ್ಟಿರುವುದರಿಂದ ಎಂಟು ವಿಶ್ವ ದಾಖಲೆಗಳಲ್ಲಿ ‘ಉತ್ಸವರಾಕ್ ಗಾರ್ಡನ್’ ಹೆಸರಿಸಲ್ಪಟ್ಟಿದೆ. ಇದು ವೈಶಿಷ್ಟತೆಗಳಿಂದ ಕೂಡಿದ ಪ್ರವಾಸಿ ತಾಣವಲ್ಲದೆ ಶೈಕ್ಷಣಿಕ, ಸಾಂಸ್ಕೃತಿಕಕೇಂದ್ರವೂ ಹೌದು. ಮಕ್ಕಳು, ಸಾಮಾನ್ಯರು, ವಿದ್ಯಾವಂತರು, ಪ್ರಜ್ಞಾವಂತರೆಲ್ಲರನ್ನು ಸಮಾನವಾಗಿ ರಂಜಿಸುವ ಅಪರೂಪದ ಸ್ಥಳ. ಸಮಾಜದ ಎಲ್ಲ ಸಮುದಾಯದ ಜನ ಒಂದೆಡೆ ಸೇರಿ ಖುಷಿಪಡುವ ಭಾವೈಕ್ಯತಾ ತಾಣ.
ಎಂಟು ವಿಶ್ವದಾಖಲೆಗಳು: ಲಿಮ್ಕಾ ಬುಕ್ ಆಫ್‌ರಿಕಾರ್ಡ್ಸ್, ಇಂಡಿಯಾ ಬುಕ್ ಆಫ್‌ರಿಕಾಡ್ಸ್‌ರ್, ರೆಕಾರ್ಡ್ ಸೆಟ್ಟರ್ (ಅಮೆರಿಕಾ), ರೆಕಾರ್ಡ ಹೋಲ್ಡರ್ಸ್‌ರಿಪಬ್ಲಿಕ್ (ಲಂಡನ್), ಯುನಿಕ್ ವಲ್ಡ್‌ರಿಕಾರ್ಡ್ಸ್, ಅಸಿಸ್ಟ್ ವಲ್ಡ್‌ರಿಕಾರ್ಡ್ಸ್, ಎವರೆಸ್ಟ್ ವಲ್ಡ್‌ರಿಕಾಡ್ಸ್ (ನೇಪಾಳ) ಹಾಗೂ ಅಮೆಜಿಂಗ್ ವರ್ಲ್ಡ್‌ರೆಕಾರ್ಡ್ಸ್.