ಬಾಯಲ್ಲಿ ನೀರೂರಿಸುವ ದೊನ್ನೆ ಬಿರಿಯಾನಿ ಮಾಡುವ ವಿಧಾನ 

21/09/2021

ಬಾಯಲ್ಲಿ ನೀರೂರಿಸುವ ಮಾಂಸಹಾರಿ ಖಾದ್ಯಗಳಲ್ಲಿ ದೊನ್ನೆ ಬಿರಿಯಾನಿಯೂ ಒಂದು. ದಕ್ಷಿಣ ಭಾರತದ ಪ್ರಸಿದ್ಧ ಮಾಂಸಹಾರಿ.

ಬೇಕಾದ ಸಾಮಾಗ್ರಿಗಳು : 1 ಕಿ.ಗ್ರಾಂ ಕೋಳಿ ಮಾಂಸ, 250 ಗ್ರಾ0 ಮೊಸರು, ಅಗತ್ಯಕ್ಕೆ ತಕ್ಕಷ್ಟು ಉಪ್ಪು, 2 ಚಮಚ ನಿಂಬೆ ಜ್ಯೂಸ್,  1 ಚಮಚ ಖಾರದ ಪುಡಿ,  1 ಚಮಚ ಅರಿಶಿಣ, 6 – ಹಸಿಮೆಣಸಿನಕಾಯಿ,  ಕೊತ್ತಂಬರಿ ಸೊಪ್ಪು,  7/8  ಕಪ್‌ ಪುದೀನಾ ಎಲೆ,  1 ಕಿ.ಗ್ರಾಂ ಅಕ್ಕಿ,  4 – ಈರುಳ್ಳಿ,  1 ಚಮಚ ಶುಂಠಿ ಪೇಸ್ಟ್, 2 ಚಮಚ ಬೆೆಳ್ಳುಳ್ಳಿ ಪೇಸ್ಟ್, 4 – ಲವಂಗದ ಎಲೆ, 1 ಚಮಚ ಕಲ್ಲಿನ ಹೂಗಳು,  ಅಗತ್ಯಕ್ಕೆ ತಕ್ಕಷ್ಟು ಚಕ್ಕೆ, ಲವಂಗ, ನಕ್ಷತ್ರ ಮೊಗ್ಗು,  ಸೋಂಪು, ಕಪ್ಪು ಏಲಕ್ಕಿ, ಅಗತ್ಯಕ್ಕೆ ತಕ್ಕಷ್ಟು ಸಂಸ್ಕರಿಸಿದ ಎಣ್ಣೆ. 

ಮಾಡುವ ವಿಧಾನ  : ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು, ನಿಂಬೆ ರಸ, ಅರಿಶಿನ, ಮೆಣಸಿನ ಪುಡಿ ಮತ್ತು ಚಿಕನ್ ಅನ್ನು ಮಿಶ್ರಗೊಳಿಸಿ, 30 ನಿಮಿಷಗಳ ಕಾಲ ಬಿಡಿ. ಕುಕ್ಕರ್ ಪಾತ್ರೆಗೆ ಸ್ವಲ್ಪ ಎಣ್ಣೆ ಮತ್ತು ತುಪ್ಪವನ್ನು ಸೇರಿಸಿ, ಬಿಸಿ ಮಾಡಿ.  ಬಿಸಿಯಾದ ನಂತರ ಗರಮ್ ಮಸಾಲ ಸೇರಿಸಿ 2 ನಿಮಿಷಗಳ ಕಾಲ ಬೇಯಿಸಿ. ನಂತರ ಹೆಚ್ಚಿಕೊಂಡ ಈರುಳ್ಳಿ ಸೇರಿಸಿ, ಹೊಂಬಣ್ಣ ಬರುವ ತನಕ ಹುರಿಯಿರಿ.  ಈಗ ಮಿಶ್ರಣಕ್ಕೆ ಚಿಕನ್ ಸೇರಿಸಿ, ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಗೊಳಿಸಿ, ಒಂದು ಸೀಟಿಯನ್ನು ಕೂಗಿಸಿಕೊಳ್ಳಬೇಕು. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿರು ಚಟ್ನಿ ಸೇರಿಸಿ, ಮಸಾಲೆ ಹುರಿಯಿರಿ.  ಬಳಿಕ ಸ್ವಲ್ಪ ಗುಲಾಬಿ ಉಪ್ಪನ್ನು ಸೇರಿಸಿ, ಮಿಶ್ರಗೊಳಿಸಿ. ಈಗ ನೆನೆಸಿಕೊಂಡ ಅಕ್ಕಿ ಮತ್ತು ನೀರನ್ನು ಕುಕ್ಕರ್ ಪಾತ್ರೆಗೆ ಸೇರಿಸಿ, ಒಂದು ಸೀಟಿಯನ್ನು ಕೂಗಿಸಿಕೊಳ್ಳಿ.  ಬಿರಿಯಾನಿ ಬೆಂದ ನಂತರ, ಪ್ಲೇಟ್‍ಗೆ ವರ್ಗಾಯಿಸಿ ಸವಿಯಲು ನೀಡಿ.