ದಿ. ಡಿ.ಎನ್. ಕೃಷ್ಣಯ್ಯ ಹೆಸರಿನಲ್ಲಿ ಕೊಡಗಿನ ಪತ್ರಕತ೯ರಿಗೆ ಪ್ರಶಸ್ತಿ

21/09/2021

ಮಡಿಕೇರಿ.ಸೆ.21- ಇಂದಿಗೂ ಕೊಡಗಿಗೆ ಸಂಬಂಧಿಸಿದಂತೆ ಮೂಲ ಆಕರ ಗ್ರಂಥವಾಗಿರುವ ಕೊಡಗಿನ ಇತಿಹಾಸ ಕೃತಿಯ ಸಾಹಿತಿ ದಿ.ಡಿ.ಎನ್.ಕೃಷ್ಣಯ್ಯ ಹೆಸರಿನಲ್ಲಿ ಅವರ ಪುತ್ರಿ ಜಿ.ಎಸ್.ಇಂದಿರಾ ಕೊಡಗು ಜಿಲ್ಲಾ ಪತ್ರಕತ೯ರ ಸಂಘದಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿದ್ದಾರೆ.

ನಾಡಿನ ಖ್ಯಾತ ಇತಿಹಾಸಕಾರರಾಗಿದ್ದ ಡಿ.ಎನ್.ಕೃಷ್ಣಯ್ಯ ಅವರ ಹೆಸರು ಚಿರಸ್ಥಾಯಿಯಾಗಬೇಕೆಂಬ ಉದ್ದೇಶದಿಂದ ಈ ದತ್ತಿ ನೀಡಿರುವುದಾಗಿ ಇಂದಿರಾ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಪತ್ರಕತ೯ರು ಯಾವುದೇ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಕನ್ನಡ ಸಾಹಿತ್ಯ ಸಂಬಂಧಿತ ಲೇಖನಕ್ಕೆ ಪ್ರತೀ ವಷ೯ ಅತ್ಯುತ್ತಮ ಲೇಖನಕ್ಕಾಗಿನ ಪ್ರಶಸ್ತಿಯನ್ನು ದತ್ತಿನಿಧಿಯಿಂದ ನೀಡಬೇಕೆಂಬ ಉದ್ದೇಶ ತನ್ನದಾಗಿದೆ ಎಂದು ಕುಂಬೂರು ನಿವಾಸಿಯಾಗಿರುವ ಇಂದಿರಾ ಸತ್ಯನಾರಾಯಣ ತಿಳಿಸಿದ್ದಾರೆ.

ಮುಂದಿನ ವಷ೯ದಿಂದ ಈ ಪ್ರಶಸ್ತಿಗೆ ಜಿಲ್ಲೆಯ ಪತ್ರಕತ೯ರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಜಿಲ್ಲಾ ಪತ್ರಕತ೯ರ ಸಂಘದ ಅಧ್ಯಕ್ಷೆ ಸವಿತಾರೈ ಮತ್ತು ಪ್ರಧಾನ ಕಾಯ೯ದಶಿ೯ ಬಾಚರಣಿಯಂಡ ಅನುಕಾಯ೯ಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sheet of black paper texture background