ಅಪ್ಪಚ್ಚ ಕವಿ ನಾಲ್ ನಾಟಕ ಒಕ್ಕಣೆ ಪೈಪೋಟಿ : ವಿಜೇತರ ಹೆಸರು ಪ್ರಕಟ

21/09/2021

ಮಡಿಕೇರಿ ಸೆ.21 : ಹರಿದಾಸ, ಅಮರಕವಿ ಅಪ್ಪನೆರವಂಡ ಅಪ್ಪಚ್ಚಕವಿಯ ಹುಟ್ಟು ಹಬ್ಬದ ಪ್ರಯುಕ್ತ ಕೊಡವಾಮೆರ ಕೊಂಡಾಟ ಸಂಘಟನೆಯ ಆಧನೆಯಲ್ಲಿ ನಡೆದ, ಮಕ್ಕಳಿಗೆ ಕವಿಯ ನಾಲ್ಕು ನಾಟಕದ ಸಂಭಾಷಣೆ ಪೈಪೋಟಿಯಲ್ಲಿ ಕಾಟಿಮಾಡ ಭಾಷಿತ ಪ್ರಥಮ, ಕೋಟೆರ ಸೂರ್ಯ ತಮ್ಮಯ್ಯ ದ್ವಿತೀಯ ಹಾಗೂ ಅಲ್ಲಪಂಡ ದೀಪ್ತಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಸಂಘಟನೆಯ ಆಡಳಿತ ಮಂಡಳಿ ನಿರ್ದೇಶಕ ಕಾರೆರ ರಂಜು ಅವರ ಪ್ರಾಯೋಜಕತ್ವದಲ್ಲಿ ನಡೆದ ಸ್ಪರ್ಧೆಯ ತೀರ್ಪುಗಾರರಾಗಿ ಚಕ್ಕೇರ ತ್ಯಾಗರಾಜ್ ಅಪ್ಪಯ್ಯ, ಚೆನಿಯಪಂಡ ಮನು ಮಂದಣ್ಣ, ಕಾಯಪಂಡ ಶಶಿಸೋಮಯ್ಯ ಅವರು ಕಾರ್ಯನಿರ್ವಹಿಸಿದರೆ, ಸ್ಪರ್ಧೆಯಲ್ಲಿ ಕೋಟೆರ ಸೂರ್ಯ ತಮ್ಮಯ್ಯ, ಕಾಟಿಮಾಡ ಭಾಷಿತ, ಅಲ್ಲಪಂಡ ದೀಪ್ತಿ, ಕರವಂಡ ಕಲ್ಪಿತ, ಚಟ್ಟಂಗಡ ಸುಜಲ, ಕಾಂಡಂಡ ಪಲ್ಲವಿ, ಬೊಜ್ಜಂಗಡ ಶ್ರಾವ್ಯ ಸೀತಮ್ಮ ಅವರು ಪಾಲ್ಗೊಂಡಿದ್ದರು.

ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್’ಬೆಳ್ಯಪ್ಪ ಅವರ ಮುಂದಾಳತ್ವದಲ್ಲಿ  ನಡೆದ ಸ್ಪರ್ಧೆಯ ಸಂಚಾಲಕರಾಗಿ ಆಡಳಿತ ಮಂಡಳಿ ನಿರ್ದೇಶಕಿ ಕುಲ್ಲಚಂಡ ವಿನುತ ಕೇಸರಿ ಅವರು ಕಾರ್ಯ ನಿರ್ವಹಿಸಿದರು.