ಕೋವಿ ಹಕ್ಕು ವಿವಾದ : ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ

22/09/2021

ಮಡಿಕೇರಿ ಸೆ.22 : ಕೊಡವರು ಹಾಗೂ ಕೊಡಗಿನ ಜಮ್ಮಾ ಹಿಡುವಳಿದಾರರಿಗೆ ಕೋವಿ ಹಕ್ಕು ಮುಂದುವರೆಯಲಿದೆ ಎಂದು ತಿಳಿಸಿರುವ ರಾಜ್ಯ ಹೈಕೋರ್ಟ್, ಕ್ಯಾಪ್ಟನ್ ಚೇತನ್ ಎಂಬುವವರು ಸಲ್ಲಿಸಿದ್ದ ಕೋವಿ ಹಕ್ಕು ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಮ್ಮಾ ಹಿಡುವಳಿದಾರರು ಮೊದಲಿನಂತೆ ಕೋವಿ ಹೊಂದಲು ಅರ್ಹರು ಎಂದು ತೀರ್ಪು ನೀಡಿದೆ.
ವಕೀಲ ಎ.ಎಸ್.ಪೊನ್ನಣ್ಣ, ಸಜನ್ ಪೂವಯ್ಯ, ಎಂ.ಟಿ.ನಾಣಯ್ಯ ಹಾಗೂ ಧ್ಯಾನ್ ಚಿಣ್ಣಪ್ಪ ಕೋವಿ ಹಕ್ಕು ಪರ ವಾದ ಮಂಡಿಸಿದ್ದರು.
ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ವಕೀಲ ಎ.ಎಸ್.ಪೊನ್ನಣ್ಣ ಅವರು ಈ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.