ಸಿಇಟಿ ಫಲಿತಾಂಶ : ಮೈಸೂರು ಹುಡುಗ ಮೇಘನ್ ರಾಜ್ಯಕ್ಕೆ ಪ್ರಥಮ

22/09/2021

ಮೈಸೂರು ಸೆ.22 : 2020-21ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಮೈಸೂರಿನ ಮೇಘನ್ ಎಚ್.ಕೆ. ಐದು ಕೋರ್ಸ್‌ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಮೇಘನ್ ವೃತ್ತಿಪರ ಕೋರ್ಸ್‌ಗಳಾದ ಎಂಜಿನಿಯರಿಂಗ್, ಕೃಷಿ, ಬಿ-ಫಾರ್ಮಾ, ಯೋಗ ಮತ್ತು ನ್ಯಾಚುರೋಪಥಿ, ಪಶು ವೈದ್ಯಕೀಯದಲ್ಲಿ ಪ್ರಥಮ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪಿಯುಸಿ ಸಿಬಿಎಸ್‌ಇಯಲ್ಲಿ 500ಕ್ಕೆ 494 ಅಂಕ ಪಡೆದುಕೊಂಡಿದ್ದರು. ತಂದೆ ಕೆ.ಆರ್. ನಗರ ಸರಕಾರಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾದರೆ, ತಾಯಿ ನೃಪತುಂಗ ಕನ್ನಡ ಶಾಲೆಯ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇಘನ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಈತನ ಸಾಧನೆ ಬಗ್ಗೆ ನಾಡಿನ ಜನ ಹೆಮ್ಮೆ ವ್ಯಕ್ತಪಡಿಸಿದ್ದಾರೆ.