Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
12:32 AM Tuesday 26-October 2021

ಕಡಗದಾಳು ಶಾಲೆಯಲ್ಲಿ ವಿದ್ಯಾಸೇತು : ರೋಟರಿ ಪಾತ್ರ ಮಹತ್ವದ್ದು : ರವೀಂದ್ರ ಭಟ್ ಹೆಮ್ಮೆ

22/09/2021

ಮಡಿಕೇರಿ ಸೆ. 22 :  ಜಗತ್ತಿನಾದ್ಯಂತ ಪೋಲಿಯೋ ನಿಮೂ೯ಲನೆಗಾಗಿ ರೋಟರಿ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂದು ರೋಟರಿ ಜಿಲ್ಲೆ 3181 ರ ರಾಜ್ಯಪಾಲ ರವೀಂದ್ರ ಭಟ್  ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಮಿಸ್ಟಿ ಹಿಲ್ಸ್ ವತಿಯಿಂದ ಕಡಗದಾಳು ಪ್ರೌಡಶಾಲಾ ವಿದ್ಯಾಥಿ೯ಗಳಿಗೆ  ಶಾಲಾ  ಸಭಾಂಗಣದಲ್ಲಿ  ವಿದ್ಯಾ ಸೇತು ಮಾರ್ಗದಶಿ೯ ಪುಸ್ತಕ ವಿತರಣೆ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರವೀಂದ್ರ ಭಟ್,   1985 ರಲ್ಲಿ ಮೊದಲ ಬಾರಿಗೆ ರೋಟರಿ ಸಂಸ್ಥೆ ಪೋಲಿಯೋ ನಿಮೂ೯ಲನೆಗಾಗಿ ವಿವಿಧ ಯೋಜನೆಗಳೊಂದಿಗೆ ಮುಂದಾಯಿತು. ಜಗತ್ತಿನಾದ್ಯಂತಲಿನ ರೋಟರಿ ಸಂಸ್ಥೆಗಳು ಪೊಲಿಯೋ ವಿರುದ್ಧ ಜಾಗತಿಕ ಹೋರಾಟಕ್ಕೆ ಟೊಂಕ ಕಟ್ಟಿ ನಿಂತವು. ಇದರ ಫಲವಾಗಿಯೇ 36 ವಷ೯ಗಳ ಬಳಿಕ ಇದೀಗ ಪಾಕಿಸ್ತಾನ, ಅಫ್ಘಾನಿಸ್ತಾನ ಹೊರತಾಗಿ ವಿಶ್ವವ್ಯಾಪಿ ಪೊಲೀಯೋ  ನಿಮೂ೯ಲನೆಯಾಗಿದ್ದು ಸದ್ಯದಲ್ಲಿಯೇ ಪೊಲೀಯೋ ಮುಕ್ತ ಜಗತ್ತು ಘೋಷಣೆಯಾಗಲಿದೆ. ರೋಟರಿ ಪೋಲಿಯೋ ವಿರುದ್ದದ ಹೋರಾಟಕ್ಕೆ ಕೈಜೋಡಿಸದೇ ಹೋಗಿದ್ದಲ್ಲಿ ವಿಶ್ವದ 10 ಮಕ್ಕಳ ಪೈಕಿ 3 ಮಕ್ಕಳು  ಪೊಲೀಯೋ  ಪೀಡಿತರಾಗುತ್ತಿದ್ದರು ಎಂದೂ ರವೀಂದ್ರ ಭಟ್ ಹೇಳಿದರು.
ಭಾರತದಲ್ಲಿ ಪ್ರಸ್ತುತ 1.56 ಲಕ್ಷ ಸದಸ್ಯರು ರೋಟರಿ ಸಂಸ್ಥೆಯಲ್ಲಿದ್ದು ಕಳೆದ ವಷ೯ ಕೋವಿಡ್ ನಿಮೂ೯ಲನೆಗಾಗಿ ಕೇಂದ್ರಸಕಾ೯ರಕ್ಕೆ ಭಾರತೀಯ ರೋಟರಿ ಸಂಸ್ಥೆಗಳು 360 ಕೋಟಿ ರೂ. ಆಥಿ೯ಕ ನೆರವು ನೀಡಿದೆ ಎಂದೂ ರವೀಂದ್ರ ಭಟ್ ಹೇಳಿದರು.
ಈ ವಷ೯ ಕನಾ೯ಟಕದ ಸಕಾ೯ರಿ ಶಾಲೆಗಳ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ  5.60 ಲಕ್ಷ ಎಸ್.ಎಸ್.ಎಲ್.ಸಿ. ವಿದ್ಯಾಥಿ೯ಗಳಿಗಾಗಿ ವಿದ್ಯಾಸೇತು ಎಂಬ ಮಾಗ೯ದಶಿ೯ ಪುಸ್ತಕಗಳನ್ನು ನೀಡಲಾಗುತ್ತಿದ್ದು  ಈಗಾಗಲೇ 1.50 ಕೋಟಿ ವಿದ್ಯಾಥಿ೯ಗಳಿಗೆ ಪುಸ್ತಕ ವಿತರಿಸಲಾಗಿದೆ. ರಾಜ್ಯದ ಶಿಕ್ಷಣ ತಜ್ಞರೇ ಪ್ರಶಂಸೆ ವ್ಯಕ್ತಪಡಿಸಿರುವ ಉಪಯುಕ್ತ ಮಾಗ೯ದಶಿ೯ ಪುಸ್ತಕ ಇದಾಗಿದೆ. ರಾಜ್ಯದ ರೋಟರಿ ಸಂಸ್ಥೆಗಳ 5 ಜಿಲ್ಲೆಗಳು  ನೀಡಿದ ಆಥಿ೯ಕ ನೆರವಾಗಿರುವ  2.75 ಕೋಟಿ ರು. ವೆಚ್ಚದಲ್ಲಿ  ವಿದ್ಯಾಸೇತು ಯೋಜನೆ ಜಾರಿಯಾಗುತ್ತಿದೆ ಎಂದೂ ರವೀಂದ್ರ ಭಟ್ ಮಾಹಿತಿ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಮಿಸ್ಟಿ ಹಿಲ್ಸ್  ವತಿಯಿಂದ ಮಡಿಕೇರಿ ವ್ಯಾಪ್ತಿಯ ಸಕಾ೯ರಿ ಶಾಲಾ ವಿದ್ಯಾಥಿ೯ಗಳಿಗೆ ಉಪಯುಕ್ತವಾಗಬಲ್ಲ ವಿದ್ಯಾಸೇತು ಮಾಗ೯ದಶಿ೯ ಕೈಪಿಡಿ ವಿತರಣೆಯ ಯೋಜನೆ ಇದೆ ಎಂದರು.  ವಿದ್ಯಾಸೇತು ಎಸ್.ಎಸ್.ಎಲ್. ಸಿ ವಿದ್ಯಾಥಿ೯ಗಳಿಗೆ ಉತ್ತಮ ಅಂಕಗಳಿಸಲು ಬಹಳ ಉಪಯುಕ್ತವಾಗಬಲ್ಲ ಮಾಗದಶಿ೯ಯಾಗಿದೆ ಎಂದೂ ಅನಿತಾ ಹೇಳಿದರು.
ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ. ಮಾತನಾಡಿ ಕಡಗದಾಳು ಸಕಾ೯ರಿ ಪ್ರೌಡಶಾಲೆಯನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯಂತ ಉತ್ತಮವಾಗಿ ರೂಪುಗೊಳಿಸಿದ ಶಿಕ್ಷಕ ವಗ೯ವನ್ನು ಅಭಿನಂದಿಸಿ ಇದು   ಸಕಾ೯ರಿ ಶಾಲೆಗಳಿಗೆ ಮಾದರಿಯಾಗಿದೆ ಎಂದೂ ಶ್ಲಾಘಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಪಿ.ಆರ್.ರಾಜೇಶ್ ವಂದಿಸಿದ ಕಾಯ೯ಕ್ರಮದಲ್ಲಿ  ಸ್ಮಿತಾ ರವೀಂದ್ರಭಟ್, ಮಿಸ್ಟಿ ಹಿಲ್ಸ್  ಶಿಕ್ಷಣ ಯೋಜನಾ ನಿದೇ೯ಶಕಿ ಸವಿತಾ ಅರುಣ್,  ರೋಟರಿ ಜಿಲ್ಲಾ ಯೋಜನಾ ನಿದೇ೯ಶಕ ದೇವಣಿರ ತಿಲಕ್, ಸಾಮಾಜಿಕ ಜಾಲತಾಣಗಳ ನಿದೇ೯ಶಕ ಮೋಹನ್ ಪ್ರಭು, ಮುಂದಿನ ವಷ೯ದ ಅಧ್ಯಕ್ಷ ಪ್ರಸಾದ್ ಗೌಡ, ಶಾಲಾ ಮುಖ್ಯ ಶಿಕ್ಷಕಿ ಗಂಗಮ್ಮ, ಶಿಕ್ಷಕ ವಗ೯, ವಿದ್ಯಾಥಿ೯ಗಳು ಪಾಲ್ಗೊಂಡಿದ್ದರು.