Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
11:52 PM Tuesday 26-October 2021

ಚಿಕ್ಲಿಹೊಳೆ ಜಲಾಶಯ : ಚೆಲ್ಲಾಟವಾಡಿದರೆ ಕಾದಿದೆ ಅಪಾಯ : ಪ್ರವಾಸಿಗರಿಗೆ ಬೇಕಿದೆ ನಿಯಂತ್ರಣ

22/09/2021

ಮಡಿಕೇರಿ ಸೆ.22 : (::ವಿಶೇಷ ವರದಿ :: ಕೆ.ಎಂ ಇಸ್ಮಾಯಿಲ್ ಕಂಡಕರೆ)  ಭೂ ಲೋಕದ ಸ್ವರ್ಗ ಎಂದೇ ಪುಟ್ಟ ಜಿಲ್ಲೆ ಕೊಡಗನ್ನು ಕರೆಯುತ್ತಾರೆ. ದಿನನಿತ್ಯ ಸಾವಿರಾರು ಪ್ರವಾಸಿಗರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತಿದ್ದಾರೆ.
ಕೊಡಗಿನ ಹೆಮ್ಮೆಯ ಸುಪುತ್ರ ಮಾಜಿ ಮುಖ್ಯಮಂತ್ರಿ ದಿವಂಗತ ಗುಂಡೂರಾವ್  ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಶಂಕುಸ್ಥಾಪನೆಗೊಂಡ ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕಂಬಿಬಾಣೆಯ‌  ಚಿಕ್ಲಿಹೊಳೆ ಜಲಾಶಯಕ್ಕೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ದಿನನಿತ್ಯ ಭೇಟಿ ನೀಡುತ್ತಿದ್ದಾರೆ.  ಆದರೆ ಜಲಾಶಯವನ್ನು ವೀಕ್ಷಿಸಲು ಬರುವ ಪ್ರವಾಸಿಗರು ತಮ್ಮ ಜೀವದೊಂದಿಗೆ ಚೆಲ್ಲಾಟ ಆಡುವ ದೃಶ್ಯ ಚಿಕ್ಲಿಹೊಳೆ ಜಲಾಶಯದಲ್ಲಿ ಕಾಣುವುದು ಸಾಮಾನ್ಯವಾಗಿದೆ‌.

ನೀರಿನಲ್ಲಿಳಿದು ಜೀವದೊಂದಿಗೆ ಚೆಲ್ಲಾಟ! 

ಚಿಕ್ಲಿಹೊಳೆ ಜಲಾಶಯ ನಿರ್ಮಾಣಗೊಂಡು ಇದುವರೆಗೆ ಏಳು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಚಿಕ್ಲಿಹೊಳೆ ಜಲಾಶಯದಲ್ಲಿ ಅಳವಡಿಸಿರುವ ಸೂಚನಾ ಫಲಕದಲ್ಲಿ ಮಾಹಿತಿ ಇದ್ದು,
ನೀರಿಗಿಳಿಯ ಬಾರದೆಂದು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಸೂಚನೆ ನೀಡಿದರು ಸಹಾ ಪ್ರವಾಸಿಗರು ಹಾಗೂ ಸ್ಥಳೀಯರು ವಾಚ್ ಮ್ಯಾನ್ ಕಣ್ತಪ್ಪಿಸಿ ಕ್ಯಾರೇ ಎನ್ನದೇ ಜೀವದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ನೀರಿ ಪ್ರಮಾಣ ಹೆಚ್ಚಿದೆ. ಫೋಟೋ ‌ಕ್ಲಿಕ್ಕಿಸುವ ಹುಚ್ಚಾಟಕ್ಕೆ ಹಲವು ಪ್ರವಾಸಿತಾಣಗಳಲ್ಲಿ ಜೀವ ಕಳೆದುಕೊಂಡವರ ಪಟ್ಟಿ ಬಹುದೊಡ್ಡದಿದೆ. ನೀರಿಗಿಳಿದು ಪ್ರವಾಸಿಗರು ತಮ್ಮ ಹುಚ್ಚಾಟವನ್ನು ಮೆರೆಯುತ್ತಿದ್ದಾರೆ,ಅಲ್ಲದೇ ‌ ನೀರಿನ‌ ಬದಿಯಲ್ಲಿ ಕುಳಿತು ಫೋಟೋ ಕ್ಲಿಕ್ಕಿಸುತ್ತಿದ್ದಾರೆ.
ಕೈ ,ಕಾಲು ತೊಳೆಯಲೆಂದು ನೀರಿಗಿಳಿದು ಪ್ರಾಣಕಳೆದುಕೊಂಡವರು ಕೂಡ ಇದ್ದಾರೆ.

ಬೇಲಿ ,ಗೇಟ್ ಹಾರಿ ಬರುವ ಸ್ಥಳೀಯರು ಹಾಗೂ ಪ್ರವಾಸಿಗರು: ಜಿಲ್ಲಾಡಳಿತವು ಬೆಳಗ್ಗೆ 8 ಗಂಟೆಯಿಂದ ಸಂಜೆ 5:30 ಗಂಟೆಯವರೆಗೆ ಪ್ರವಾಸಿಗರಿಗೆ ಚಿಕ್ಲಿಹೊಳೆ ಜಲಾಶಯವನ್ನು ವೀಕ್ಷಿಸಲು ಅವಕಾಶ ನೀಡಿದೆ. ಸಂಜೆ
5:30 ಗಂಟೆಯ ನಂತರ ಗೇಟ್ ಮುಚ್ಚಲಾಗುತ್ತದೆ. ತದನಂತರ ಪ್ರವಾಸಿಗರಾಗಲಿ ಅಥವಾ ಸ್ಥಳೀಯರಾಗಲಿ ಚಿಕ್ಲಿಹೊಳೆ ‌ಜಲಾಶಯಕ್ಕೆ ಭೇಟಿ ನೀಡುವಂತಿಲ್ಲ. ಸಂಜೆ ಗೇಟ್ ಮುಚ್ಚಲ್ಪಟ್ಟ ನಂತರವೇ ಚಿಕ್ಲಿಹೊಳೆ ಜಲಾಶಯದಲ್ಲಿ ‌ನೀರಿಗಿಳಿದು ಸಾವುಗಳು ಸಂಭವಿಸಿರುವುದು. ಗೇಟ್ ಮುಚ್ಚಲ್ಪಟ್ಟಿದ್ದರೂ ಸಹಾ, ಪ್ರವಾಸಿಗರು ಹಾಗೂ ಸ್ಥಳೀಯರು ಗೇಟ್ ಹಾಗೂ ಬೇಲಿ ಹಾರಿ ಚಿಕ್ಲಿಹೊಳೆ ಜಲಾಶಯಕ್ಕೆ ಭೇಟಿ ನೀಡುತ್ತಿದ್ದಾರೆ. ಸಂಜೆಯ 5:30 ಗಂಟೆಯ ನಂತರ ಡ್ಯಾಂ ವಾಚ್ ಮ್ಯಾನ್ ಇರುವುದಿಲ್ಲ. ಈ‌ ಸಮಯದಲ್ಲಿ ಪ್ರವಾಸಿಗರು, ಗೇಟ್ ಹಾಗೂ ಬೇಲಿ ಹಾರಿ ನೀರಿಗಿಳಿಯುತ್ತಿದ್ದಾರೆ.

ಒಬ್ಬರೇ ಡ್ಯಾಂ ವಾಚ್ ಮ್ಯಾನ್: ಬೆಳಗ್ಗೆ 8:00 ಗಂಟೆಯಿಂದ 5:30 ಗಂಟೆಯವರೆಗೆ ಡ್ಯಾಂ ವಾಚ್ ಮ್ಯಾನ್ ಆಗಿ, ಗುತ್ತಿಗೆ ಆಧಾರದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಜೆಯ 5:30 ನಂತರ ಡ್ಯಾಂ ನಿರ್ವಹಣೆ ಹಾಗೂ ಜಲಾಶಯವನ್ನು ನೋಡಿಕೊಳ್ಳಲು ಯಾರೂ ಕೂಡ ಇರುವುದಿಲ್ಲ.
ಈ ಸಮಯದಲ್ಲಿ ಬೇಲಿ ಹಾಗೂ ಗೇಟ್ ಹಾರಿ ಪ್ರವಾಸಿಗರು ಹಾಗೂ ಸ್ಥಳೀಯರು ಚಿಕ್ಲಿಹೊಳೆ ಜಲಾಶಯಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲದೇ ಕೇಳಲು ಯಾರೂ ಕೂಡ ಇಲ್ಲ ಎಂಬ‌ ಧೈರ್ಯದಿಂದ ಸ್ನಾನ ಮಾಡಲು ‌ನೀರಿಗಿಳಿದು ಜೀವದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ರಾತ್ರಿ ಸಮಯದಲ್ಲಿ ನೀರಿನ‌ ಬದಿಯಲ್ಲಿ ‌ಕುಳಿತು ಮದ್ಯಪಾನ ಕೂಡ ಮಾಡುತ್ತಿದ್ದಾರೆ. ಅಲ್ಲಲ್ಲಿ ಮದ್ಯದ ಬಾಟಲಿಗಳು ಕಾಣುತ್ತಿದೆ. ಸಂಜೆಯ ನಂತರ ನಿರ್ವಾಹಕರಿಲ್ಲದೆ ಡ್ಯಾಂ ನಲ್ಲಿ ಪ್ರವಾಸಿಗರು ತಮ್ಮ ಮನಬಂದಂತೆ ವರ್ತಿಸುತ್ತಿದ್ದಾರೆ. ಸಂಜೆ 5:30 ನಂತರ ಡ್ಯಾಂ ವಾಚ್ ಮ್ಯಾನ್ ಆಗಿ ಕಾರ್ಯನಿರ್ವಹಿಸಲು ಮತ್ತೊಬ್ಬ ಡ್ಯಾಂ ವಾಚ್ ಮ್ಯಾನ್ ನನ್ನು ಸರ್ಕಾರ ನೇಮಿಸಬೇಕಾಗಿದೆ.

ಮೂರು ತಿಂಗಳಿನಿಂದ ಕೈ‌ ಸೇರದ ಸಂಬಳ: ಗುತ್ತಿಗೆ ಆಧಾರದಲ್ಲಿ ಚಿಕ್ಲಿಹೊಳೆ ಜಲಾಶಯದಲ್ಲಿ‌‌ ಕಳೆದ ಹನ್ನೊಂದು ವರ್ಷಗಳಿಂದ ಡ್ಯಾಂ ‌ ‌ವಾಚ್ ಮ್ಯಾನ್ ಆಗಿ ಒಬ್ಬರು ಮಾತ್ರ ,ಬೆಳಗ್ಗೆ ‌8 ರಿಂದ 5:30 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಈ‌ ದಿನಗಳಲ್ಲಿ ಪ್ರವಾಸಿಗರನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಿದೆ‌. ಗುತ್ತಿಗೆ ಆಧಾರದಲ್ಲಿ ಡ್ಯಾಂ‌ ವಾಚ್ ಮ್ಯಾನ್ ಕೆಲಸ ಮಾಡುತ್ತಿರುವ ಮೇದಪ್ಪ ಅವರಿಗೆ ಕಳೆದ ಮೂರು ತಿಂಗಳಿನಿಂದ ದುಡಿದ ಸಂಬಳ ಕೂಡ ಕೈ ಸೇರಿಲ್ಲ. ಹಾಗೂ ಒಬ್ಬರೇ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಬಗ್ಗೆ ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ಇಲಾಖೆಯವರು ಒಮ್ಮೆ ಗಮನಹರಿಸಬೇಕಾಗಿದೆ.

ನೆಟ್ ಅವಳಡಿಸಲು ಒತ್ತಾಯ: ನೀರಿಗಿಳಿಯ ಬೇಡಿ ಎಂದು ಹಲವು ಬಾರಿ ಸೂಚನೆ ನೀಡಿದರು ಸಹಾ ಪ್ರವಾಸಿಗರು ಕೇಳುತ್ತಿಲ್ಲ. ನನ್ನ ವಿರುದ್ಧವೇ ತಿರುಗಿ ಬೀಳುತ್ತಾರೆ. ನನ್ನ ಕಣ್ತಪ್ಪಿಸಿ ನೀರಿಗಿಳಿಯಲು ಪ್ರಯತ್ನಿಸುತ್ತಾರೆ. ನಾನೊಬ್ಬನೇ ಡ್ಯಾಂ ವ್ಯಾಚ್ ಮ್ಯಾನ್ ಇರುವುದು ಎಂದು ಡ್ಯಾಂ ವಾಚ್ ಮ್ಯಾನ್ ಮೇದಪ್ಪ ಹೇಳುತ್ತಾರೆ.
ಚಿಕ್ಲಿಹೊಳೆ ‌ಜಲಾಶಯದಲ್ಲಿ 60 ಹೆಚ್ಚು ಆಳದಲ್ಲಿ ನೀರಿದೆ‌. ಹಾಗೂ ನೀರಿನ ಅಲ್ಲಲ್ಲಿ ಬೃಹತ್ ಗುಂಡಿಗಳಿವೆ.
ಇದರ ಬಗ್ಗೆ ಪ್ರವಾಸಿಗರಿಗೆ ಮಾಹಿತಿ‌ ಇಲ್ಲ. ಸ್ನಾನ ಮಾಡಲು ಎಂದು ನೀರಿಗಿಳಿದು ಪ್ರಾಣ ಕಳೆದುಕೊಳ್ಳಲು ಮುಂದಾಗುತ್ತಿದ್ದಾರೆ. ಪ್ರವಾಸಿಗರು ಹಾಗೂ ಸ್ಥಳೀಯರು ನೀರಿಗಿಳಿಯದಂತೆ ತಡೆಗಟ್ಟಲು ನೀರಿನ ಬದಿಯ ಸುತ್ತಲೂ ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ಇಲಾಖೆಯವರು ನೆಟ್ ಅಳವಡಿಸಿ ಜನರು ನೀರಿಗಿಳಿಯದಂತೆ ತಡೆಗಟ್ಟಿ,ಪ್ರಾಣ ಹೋಗುವುದನ್ನ ತಪ್ಪಿಸಬೇಕಾಗಿದೆ.

ಕಳೆದ ಹದಿನೊಂದು ವರ್ಷಗಳಿಂದ ಡ್ಯಾಂ ವಾಚ್ ಮ್ಯಾನ್ ಆಗಿ ಒಬ್ಬನೇ ಕೆಲಸ ಮಾಡುತ್ತಿದ್ದೇನೆ.
ನಾನು ಊಟ ಮಾಡಲು ಬಂದರೆ,ನನ್ನ ಕಣ್ತಪ್ಪಿಸಿ ಪ್ರವಾಸಿಗರು ನೀರಿಗಿಳಿಯುತ್ತಾರೆ.
ಕೆಲವೊಮ್ಮೆ ನನಗೆ ಊಟ ಮಾಡಲು ಸಹಾ ಟೈಮ್ ಸಿಗಲ್ಲ.
ಪ್ರವಾಸಿಗರಿಗೆ ನೀರಿಗಿಳಿಯಬೇಡಿ ಎಂದು ಹೇಳಿದರೆ,ನನ್ನ ವಿರುದ್ಧ ಮಾತನಾಡುತ್ತಾರೆ.
ಸಂಜೆ ಸಮಯದಲ್ಲಿ ಗೇಟ್ ಮುಚ್ಚಿದರೂ ಸಹಾ ಬೇಲಿ ಹಾರಿ ಒಳಗೆ ಬರುತ್ತಾರೆ. :: ಎ.ಪಿ ಮೇದಪ್ಪ ಸುಬ್ರಮಣಿ, ಚಿಕ್ಲಿಹೊಳೆ ಡ್ಯಾಂ ವಾಚ್ ಮ್ಯಾನ್

ಚಿಕ್ಲಿಹೊಳೆ ಡ್ಯಾಂ ಅನ್ನು ಪ್ರವಾಸೋದ್ಯಮ ಇಲಾಖೆ ಸರಿಯಾಗಿ ‌ನಿರ್ವಹಣೆ ಮಾಡಬೇಕಾಗಿದೆ.
ರಾತ್ರಿ ಸಮಯದಲ್ಲಿ ಜಲಾಶಯದ ಬದಿಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದಾರೆ.
ರಾತ್ರಿ ಸಮಯದಲ್ಲಿ ಡ್ಯಾಂ ವಾಚ್ ಮ್ಯಾನ್ ಆಗಿ ಕಾರ್ಯನಿರ್ವಹಿಸಲು ಒಬ್ಬರನ್ನು ನೇಮಿಸಬೇಕಾಗಿದೆ.
ಹಾಗೂ ಪ್ರವಾಸಿಗರು ನೀರಿಗಿಳಿಯದಂತೆ ತಡೆಯಲು ನೀರಿನ‌ ಸುತ್ತಲೂ ನೆಟ್ ಅವಳಡಿಸಬೇಕಾಗಿದೆ . ::ಮಧುಸೂದನ್ ಪಿ.ಜಿ,ಗ್ರಾಮ ಪಂಚಾಯತಿ ಸದಸ್ಯ ಕಂಬಿಬಾಣೆ