Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
10:35 PM Tuesday 26-October 2021

ದೇಶಕ್ಕಾಗಿ ಪ್ರಾಣ ತೆತ್ತ ಕೊಡಗಿನ ಕೂಕಂಡ ಪೊನ್ನಪ್ಪ

22/09/2021

ಮಡಿಕೇರಿ ಸೆ.22 :  ಕೊಡಗು ವೀರರನಾಡು, ಗಂಡುಗಲಿಗಳ ಬೀಡು. ಇಲ್ಲಿ ಜಿಲ್ಲೆಯ ಹೆಚ್ಚಿನ ಮಂದಿ ಸೈನಿಕರಾಗಿ ಭಾರತ ಮಾತೆಯ ಸೇವೆ ಮಾಡಿದ್ದಾರೆ. ಮಾಡುತ್ತಲೂ ಇದ್ದಾರೆ, ಅದರಲ್ಲೂ ಕ್ಷತ್ರಿಯ ಧರ್ಮದ ಕೊಡವರು ಯುದ್ಧದಲ್ಲಿ ಮರಣವನಪ್ಪಿದರೆ ಸ್ವರ್ಗಪ್ರಾಪ್ತಿ ಎಂದು ನಂಬಿದವರು. ಮನೆಯಲ್ಲಿ ಬದುಕಿ ಬಾಳುವಷ್ಟಿದ್ದರೂ ಅನೇಕರು ಇಂದೂ ಭಾರತೀಯ ಸೇನೆಯಲ್ಲಿ ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ. ಫೀಲ್ಡ್ ಮಾರ್ಷಲ್ ಕೊಡಂದೆರ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಿಂದ ಮೊದಲ್ಲೊಂಡು ಅನೇಕ ವೀರಯೋಧರು ಭಾರತಮಾತೆಯ ಸೇವೆಯಲ್ಲಿ ತಮ್ಮನು ತಾವು ಅರ್ಪಿಸಿಕೊಂಡಿದ್ದಾರೆ.
ಇಂತಹ ವೀರಪರಂಪರೆಯ ಸಾಲಿಗೆ ಸೇರಿರುವ ಮತ್ತೊಬ್ಬ ಅಮರಯೋಧ ನಾಯಕ್ ದಿ.ಕೂಕಂಡ ಪೊನ್ನಪ್ಪ(ಮಣಿ). ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಹಳ್ಳಿಗಟ್ಟು ಗ್ರಾಮದವರು. ಸ್ವಾತಂತ್ರ ಹೋರಾಟಗಾರ ದಿವಂಗತ ನಂಜಪ್ಪ ಹಾಗೂ ದಿ.ಗಂಗಮ್ಮ ದಂಪತಿಯ ಹಿರಿಯ ಪುತ್ರ.
ಪೊನ್ನಂಪೇಟೆಯಲ್ಲಿ ಶಾಲಾದಿನಗಳನ್ನು ಆರಂಭಿಸಿ ಉತ್ತಮ ಕ್ರೀಡಾಪಟು ಮತ್ತು ಅಥ್ಲೇಟಿಕ್‍ನಲ್ಲಿ ಮುಂದೆ ಇದ್ದ ಪೊನ್ನಪ್ಪ ತಮ್ಮ18ನೇ ವಯಸ್ಸಿನಲ್ಲಿ ಅಂದರೆ 1957ರಲ್ಲಿ ಭಾರತಿಯ ಸೇನಾ ಪಡೆಯ ಒಂದು ವಿಭಾಗವಾದ ಮೆಡ್ರಾಸ್ ರೆಜಿಮೆಂಟ್‍ನ್ನು ಸೇರಿ ವೆಲ್ಲಿಂಗ್ಟನ್‍ನಲ್ಲಿ ತಮ್ಮ ತರಬೇತಿಯನ್ನು ಪಡೆದುಕೊಂಡರು. ತರಬೇತಿ ಮುಗಿಯುತ್ತಿದ್ದಂತೆ ದೇಶದಲ್ಲಿ ಪ್ರಾರಂಭವಾಗಿದ್ದ ನಾಗಲ್ಯಾಂಡ್ ಹೋರಾಟವನ್ನು ನಿಯಂತ್ರಿಸುವ ಕರ್ತವ್ಯದೊಂದಿಗೆ ದೇಶಸೇವೆಯ ಕಾರ್ಯಕ್ಕೆ ಮುಂದಾದ ಪೊನ್ನಪ್ಪ ನಂತರ ಒಂದರ ಹಿಂದೆ ಮತ್ತೊಂದರಂತೆ ಬಂದ ಭಾರತ-ಚೀನಾ ಯುದ್ಧದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಸಂದರ್ಭ ಇವರು ಯುದ್ಧ ಭೂಮಿಯಲ್ಲಿ ಕಾಣೆಯಾಗುತ್ತಾರೆ.
ಆ ಸಮಯದಲ್ಲಿ ಸೇನಾ ಮುಖ್ಯಸ್ಥರು ಇವರು ಯುದ್ಧದಲ್ಲಿ ಮರಣವನ್ನಪ್ಪಿದ್ದಾರೆ ಎಂಬ ಸಂದೇಶವನ್ನು ಕೂಕಂಡ ಪೊನ್ನಪ್ಪನವರ ಸಂಸಾರಕ್ಕೆ ಮಾಹಿತಿ ರವಾನಿಸಿ ಬಿಡುತ್ತಾರೆ. ಕುಟುಂಬ ಶೋಕಮಡುಗಟ್ಟಿದರೆ ನೆಂಟರಿಷ್ಟರು ಸಂಸಾರವನ್ನು ಸಂತೈಸುವ ಕಾರ್ಯದಲ್ಲಿರಬೇಕಾದರೆ, ಇವರ ಸ್ನೇಹಿತನ ಮುಖಾಂತರ ಇವರು ಬದಿಕಿರುವ ವಿಷಯ ತಿಳಿಯುತ್ತದೆ.
ಸುಮಾರು ಒಂದು ತಿಂಗಳುಗಳಕಾಲ ಅರಣ್ಯದೊಳಗೆ ದಾರಿತಪ್ಪಿ ಗೆಡ್ಡೆಗೆಣಸು ತಿಂದು ಬದುಕಿ ಹರಸಾಹಸದೊಂದಿಗೆ ತನ್ನ ಸೇನಾನೆಲೆಗೆ ಬಂದು ತಲುಪುತ್ತಾರೆ. ಪುನ: ಸೇನೆಯಲ್ಲಿ ಕೆಚ್ಚೆದೆಯಿಂದ ತಮ್ಮಸೇವೆಯನ್ನು ಮುಂದುವರೆಸುತ್ತಾರೆ.
ಉತ್ತಮ ಹಾಕಿಪಟು ಹಾಗೂ ಬಾಕ್ಸರ್ ಆಗಿದ್ದಂತಹ ಪೊನ್ನಪ್ಪರವರು ತರಬೇತಿಯನ್ನು ಪಡೆದ ಕ್ಷಣದಿಂದಲೇ ಯುದ್ದಭೂಮಿಯಲ್ಲೆ ಕಾಲ ಕಳೆಯುವಂತಾಯಿತು. ಇವರ ಕ್ರೀಡಾ ಆಸಕ್ತಿ ಮತ್ತು ಇವರ ಕಾರ್ಯದಕ್ಷತೆಯಿಂದ ನಾಯಕ್ ಹುದ್ದೆಯನ್ನು ಅಲಂಕರಿಸಿ ಪಂಜಾಬಿನ ಅಂಬಾಲದಲ್ಲಿ ಸ್ವಲ್ಪಸಮಯ ಕೆಲಸದಲ್ಲಿ ನಿರತರಾಗಿದ್ದ ಸಮಯದಲ್ಲೇ 1965ರಲ್ಲಿ ಇಂಡೋ-ಪಾಕ್ ಯುದ್ಧ ಪ್ರಾರಂಭಗೊಳ್ಳುತ್ತದೆ. ಪಂಜಾಬಿನಿಂದಲೇ ಯುದ್ಧದ ಮುಂಚೂಣಿಯಲ್ಲಿ ತೊಡಗಿಸಿಕೊಂಡ ಇವರು ತಮ್ಮ ಸೇನಾಬಳದೊಂದಿಗೆ ಶತ್ರುಪಡೆಯನ್ನು ಸದೆಬಡಿಯುತ್ತಾ ಪಾಕಿಸ್ತಾನದೊಳಗೆ ಪ್ರವೇಶಿಸಿ ಯುದ್ಧ ಮಾಡಿದ ಗಂಡುಗಲಿ.
ಆದರೆ ತಾ.21.9.1965ರಂದು ಎರಡು ಕಡೆಗಳಿಂದ ಯುದ್ದ ವಿರಾಮ ಘೋಷಣೆಗೊಂಡು ಯುದ್ಧದ ಗುಂಗಿನಿಂದ ಹೊರಬಂದು ಅಲ್ಲೇ ವಿರಾಮವನ್ನು ಪಡೆಯುತ್ತಿರಬೇಕಾಗುತ್ತದೆ. 1965ರ ಸೆಪ್ಟೆಂಬರ್ 22 ರಂದು ಬೆಳಿಗ್ಗೆ ಹಠತ್ತಾಗಿ ಶತ್ರುದೇಶ ಸಿಡಿಸಿದ ಶೆಲ್ ದಾಳಿಗೆ ಗುರಿಯಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೂಕಂಡ ಪೊನ್ನಪ್ಪ ಮರಣವನ್ನು ಅಪ್ಪುತ್ತಾರೆ.
1957 ರಿಂದ 1965 ರ ವರೆಗೆ ಸುಮಾರು 7 ವರ್ಷಗಳ ಕಾಲ ಯುದ್ಧ ಭೂಮಿಯಲ್ಲೇ ತನ್ನಜೀವನವನ್ನೇ ಕಳೆದು ಭಾರತಮಾತೆಗೆ ತಮ್ಮ ಪ್ರಾಣವನ್ನು ನೀಡಿ, ಇವರ ವೀರಮರಣಕ್ಕೆ 56 ವರ್ಷ ಸಂದರು ಅವರ ಧೈರ್ಯ, ಸಾಹಸ ಕೆಲವೇ ಸಮಯದಲ್ಲಿ ಮಾಡಿದ ದೇಶಸೇವೆ ಇಂದಿನ ಯುವ ಸಮುದಾಯಕ್ಕೊಂದು ಮಾದರಿಯಾಗಲಿದೆ.
2002ರಲ್ಲಿ ಭಾರತೀಯ ಸೇನೆಯ ಯೂನಿಟ್‍ನಲ್ಲಿ ವೀರಮರಣವನ್ನಪ್ಪಿದ ಯೋಧರ ಕುಟುಂಬಕ್ಕೆ ಗೌರವಸಲ್ಲಿಸುವ ಕಾರ್ಯಕ್ರಮದಲ್ಲಿ ಪೊನ್ನಪ್ಪನವರ ಮರಣೋತ್ತರವಾಗಿ ಸಹೋದರ ಕೂಕಂಡ ಕಾವೇರಪ್ಪ ಅವರಿಗೆ ಸೇನಾ ಮೆಡಲ್ ನೀಡಿ ಗೌರವಿಸಲಾಯಿತು.
ಎಲ್ಲೂ ಕೂಡಂಡ ಪೊನ್ನಪ್ಪ ಅವರ ಸ್ಮರಣೆಯಾಗುತ್ತಿಲ್ಲ. ಅವರ ಕೂಟ್ಟೂರಾದ ಪೊನ್ನಂಪೇಟೆಯಲ್ಲೂ ಯಾವುದೇ ಕಾರ್ಯಕ್ರವಾಗಲಿ, ಸಂಘ-ಸಂಸ್ಥೆಗಳಾಗಲಿ ವೀರ ಯೋಧನಿಗೆ ಗೌರವಸಲ್ಲಿಸುವ ಕಾರ್ಯವನ್ನು ಮರೆತಿರುವುದು ಬೇಸರದ ಸಂಗತಿ. ಕೂಕಂಡ ಪೊನ್ನಪ್ಪ ಅವರು ವಾಸವಿದ್ದ ಪೊನ್ನಂಪೇಟೆಯಿಂದ ಗೋಣಿಕೊಪ್ಪದ ಮುಖ್ಯರಸ್ತೆಗೆ ವೀರ ಯೋಧ ಕೂಕಂಡ ಪೊನ್ನಪ್ಪ ಅವರ ಹೆಸರಿಡುವ ಮೂಲಕ ವೀರಯೋಧನಿಗೆ ಗೌರವ ಸಲ್ಲಿಸುವಂತಾಗಲಿ.

ವಿಶೇಷ ವರದಿ : ಪುತ್ತರಿರ ಕರುಣ್‍ ಕಾಳಯ್ಯ, ಚೆಟ್ಟಳ್ಳಿ