Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
10:44 PM Tuesday 26-October 2021

ನಾಲ್ಕು ಕೃತಿ ಅನಾವರಣ : ಕೊಡಗು ಕರ್ನಾಟಕಕ್ಕೆ ಆದರ್ಶಪ್ರಾಯವಾಗಿದೆ : ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯ

22/09/2021

ಮಡಿಕೇರಿ ಸೆ.22 : ತನ್ನದೇ ಆದ ವಿಶಿಷ್ಟ ಇತಿಹಾಸ ಪರಂಪರೆಯನ್ನು ಹೊಂದಿ, ಸಮಾನತೆಯ ಪರಿಕಲ್ಪನೆಯನ್ನು ತನ್ನ ಆಂತರ್ಯದಲ್ಲಿ ತುಂಬಿಕೊಂಡಿರುವ ‘ಕೊಡಗು’ ಹಲವಾರು ವಿಚಾರಗಳಲ್ಲಿ ಕರ್ನಾಟಕಕ್ಕೆ ಆದರ್ಶ ಪ್ರಾಯವಾಗಿದೆಯೆಂದು ಹಿರಿಯ ಸಾಹಿತಿಗಳಾದ ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಆಯೋಜಿತ ಸಾಹಿತಿಗಳಾದ ಡಾ. ಜೆ. ಸೋಮಣ್ಣ ಅವರ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು, ‘ಅಶ್ವತ್ಥರ ಕಥಾ ಸಾಹಿತ್ಯ’ ಪುಸ್ತಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಪಶ್ಚಿಮ ಘಟ್ಟ ಸಾಲಿನಲ್ಲಿ ಬರುವ ಕೊಡಗಿಗೆ ಮಹಾತ್ಮಾ ಗಾಂಧೀಜಿಯವರು ಭೇಟಿ ನೀಡಿದ ಸಂದರ್ಭ ಅವರಿಗೆ ತನ್ನ ಆಭರಣಗಳನ್ನು ತೆಗೆದುಕೊಡುವ ಮೂಲಕ ಹಿರಿಮೆ ಮೆರೆದ ಕೊಡಗಿನ ಗೌರಮ್ಮ ನಿಬ್ಬೆರಗಾಗುವ ಅತ್ಯಮೂಲ್ಯ ಕಥೆಗಳನ್ನು ನೀಡಿರುವುದಲ್ಲದೆ, ತಮ್ಮ ಸಾಹಿತ್ಯದ ಮೂಲಕ ಜಾತ್ಯತೀತ ನಿಲುವನ್ನು ಸಾರಿದ ಮಹತ್ವದ ಸಾಹಿತಿಯಾಗಿದ್ದಾರೆ. ಇವರಂತೆಯೇ ಭಾರತೀಸುತ ಅವರು ಒಬ್ಬ ಶ್ರೇಷ್ಟ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಈ ನೆಲದ ಸಾಹಿತಿ ನಡಿಕೇರಿಯಂಡ ಚಿಣ್ಣಪ್ಪ ಅವರ ‘ಪಟ್ಟೋಲೆ ಪಳಮೆ’ ಶ್ರೇಷ್ಟ ಕೃತಿಯಾಗಿದೆ. ಅದರಲ್ಲೂ ಪಂಜೆ ಮಗೇಶರಾಯರ ‘ಎಲ್ಲಿ ಭೂರಮೆ ದೇವ ಸನ್ನಿಧಿ’ ಎನ್ನುವ ಕೊಡಗಿನ ಕುರಿತ ಪದ್ಯ ಅತ್ಯಪೂರ್ವ. ಭಾರತದ ಇತರ ಯಾವುದೇ ಪ್ರದೇಶಕ್ಕೆ ಸಂಬಂಧಿಸಿದಂತೆ ಇಷ್ಟೊಂದು ಸೊಗಸಾದ ಸಾಹಿತ್ಯ ಮೂಡಿ ಬಂದಿಲ್ಲವೆAದು ಮೆಚ್ಚುಗೆಯ ನುಡಿಗಳನ್ನಾಡಿದರು.
ಕ್ರೀಡಾ ಕ್ಷೇತ್ರ, ರಾಷ್ಟçದ ಸೈನ್ಯಕ್ಕೆ ಅತ್ಯಪೂರ್ವವಾದ ಕಾಣಿಕೆಯನ್ನು ನೀಡಿರುವ ಈ ಕೊಡಗು, ರಾಜ್ಯದ ಇತರೆ ಜಿಲ್ಲೆಗಳಿಗೂ ಮಾದರಿಯಾಗಿದೆಯೆಂದ ಕಾಳೇಗೌಡ ನಾಗವಾರ ಅವರು, ಎಲ್ಲಾ ಜಾತಿಗಳಲ್ಲಿಯೂ ಒಳ್ಳೆಯದು ಮತ್ತು ಕೆಟ್ಟದ್ದು ಎಂಬುದು ಇರುತ್ತದಲ್ಲದೆ, ಎಲ್ಲರೂ ಒಟ್ಟಾಗಿ ಮಹಿಳೆಯ ಶೋಷಣೆ ಮಾಡುವ ಸ್ಥಿತಿಗಳನ್ನು ನಾವು ಕಾಣಬಹುದು. ಇಂತಹ ಸಮಾಜ ವ್ಯವಸ್ಥೆಗಳ ನಡುವೆ ಒಳಿತನ್ನು ಮಾಡುವ ಚಿಂತನ ಶೀಲ ಪ್ರಕ್ರಿಯೆಗಳಿಗೆ ಎಲ್ಲರೂ ಕೈಗೂಡಿಸುವುದು ಸಾಮೂಹಿಕ ಹೊಣೆಗಾರಿಕೆಯಾಗಿದೆಯೆಂದು ಅಭಿಪ್ರಾಯಿಸಿದರು.
ಶ್ರೀನಾರಾಯಣ ಗುರುಗಳ ಕುರಿತ ‘ಮೌನ ಕಣಿವೆಯ ಸಂತ’ ಪುಸ್ತಕವನ್ನು ಅನಾವರಣಗೊಳಿಸಿದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಒಂದೂವರೆ ಶತಮಾನಗಳ ಹಿಂದೆ ಶ್ರೀ ನಾರಾಯಣ ಗುರುಗಳು ಸಮಾನತೆಯ ಸಮಾಜಕ್ಕಾಗಿ ನಡೆಸಿದ ಹೋರಾಟಗಳು ಮಾನವ ಕುಲದ ಏಕತೆಗೆ ನಾದಿಯನ್ನು ಹಾಡಿದೆ. ಶೋಷಿತ ಸಮಾಜದ ಜನತೆಗೆ ಅರಿವಿನ ಬೆಳಕನ್ನು ನೀಡಿದ ಮಹಾನ್ ಚೇತನವೇ ಶ್ರೀ ನಾರಾಯಣ ಗುರುಗಳೆಂದು ಅಭಿಪ್ರಾಯಿಸಿದರು.
ಕೊಂಡು ಓದುವ ಆಂದೋಲನ ನಡೆಯಲಿ- ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿ ಸಾಹಿತಿಗಳು ಹೊರ ತರುವ ಪುಸ್ತಕಗಳನ್ನು ಕೊಂಡು ಓದುವ ಆಂದೋಲನ ಆರಂಭವಾಗಬೇಕೆನ್ನುವ ಆಶಯವನ್ನು ಅವರು ವ್ಯಕ್ತಪಡಿಸಿದರು.
ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಜಿಪಂ ಮಾಜಿ ಸದಸ್ಯರಾದ ವಿ.ಪಿ. ಶಶಿಧರ್ ‘ಗಿರಿಸೀಮೆಯ ಹಾಡುಪಾಡು’ ಪುಸ್ತಕವನ್ನು, ವಕೀಲರು ಹಾಗೂ ಸಾಹಿತಿಗಳಾದ ಕೆ.ಆರ್. ವಿದ್ಯಾಧರ್ ‘ ಕನ್ನಡ ಸಾಹಿತ್ಯಕ್ಕೆ ಕೊಡಗಿನ ಕೊಡುಗೆ’ ಪುಸ್ತಕವನ್ನು ಅನಾವರಣಗೊಳಿಸಿದರು.
ಅತಿಥಿಗಳಾಗಿ ವಿ.ಕೆ.ಲೋಕೇಶ್ ಉಪಸ್ಥಿತರಿದ್ದರು. ಬಳಗದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಯಾಕತ್ ಆಲಿ ನಾಡಗೀತೆಯನ್ನು ಹಾಡಿದರೆ, ಬಳಗದ ನಿರ್ದೇಶಕ ಅಂಬೇಕಲ್ ನವೀನ್ ಸ್ವಾಗತಿಸಿ, ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.