ಪೊನ್ನಂಪೇಟೆ ಹಳ್ಳಿಗಟ್ಟು : ಗಾಂಜಾ ಬೆಳೆದ ಆರೋಪಿ ಬಂಧನ

22/09/2021

ಮಡಿಕೇರಿ ಸೆ.22 : ಮನೆಯ ಆವರಣದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.
ಹಳ್ಳಿಗಟ್ಟು ಗ್ರಾಮದ ದೇವ ಕಾಲೋನಿಯ ನಿವಾಸಿ ಹೆಚ್.ಜಿ.ಮೋಹನ್(32) ಬಂಧಿತ ಆರೋಪಿ. ತನ್ನ ಮನೆಯ ಆವರಣದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ದಾಳಿ ನಡೆಸಿದ ಪೊಲೀಸರು ಸುಮಾರು 50 ಸಾವಿರ ರೂ. ಮೌಲ್ಯದ 9 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಗೋಣಿಕೊಪ್ಪ ವೃತ್ತ ಸಿ.ಪಿ.ಐ ಎಸ್.ಎನ್.ಜಯರಾಮ್, ಪೊನ್ನಂಪೇಟೆ ಠಾಣಾ ಪಿಎಸ್‌ಐ ಡಿ.ಕುಮಾರ್, ಸಿಬ್ಬಂದಿಗಳಾದ ಎಂ.ಡಿ.ಮನು, ಪಿ.ಎ.ಮಹಮದ್ ಅಲಿ, ಕೆ.ಎಸ್.ಮಹೇಂದ್ರ, ಅಬ್ದುಲ್ ಮಜೀದ್, ಮಹದೇಶ್ವರ ಸ್ವಾಮಿ, ಹೇಮಲತಾ ರೈ, ಅಬ್ದುಲ್ ಬಷೀರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸರ ಕರ್ತವ್ಯ ನಿಷ್ಠೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಶ್ಲಾಘಿಸಿದ್ದಾರೆ.