ಟ್ರ್ಯಾಕ್ಟರ್ ಹರಿದು ಮಹಿಳೆ ಸಾವು : ತಾವರೆಕೆರೆಯಲ್ಲಿ ಘಟನೆ

23/09/2021

ಮಡಿಕೇರಿ ಸೆ.23 : ರಸ್ತೆ ಮಧ್ಯೆ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ರಸ್ತೆಗೆ ಬಿದ್ದ ಮಹಿಳೆ ಮೇಲೆ ಟ್ರ್ಯಾಕ್ಟರ್ ಹರಿದು ಮಹಿಳೆ ಮೃತಪಟ್ಟಿರುವ ಘಟನೆ ಕುಶಾಲನಗರದ ತಾವರೆಕೆರೆ ಎಂಬಲ್ಲಿ ಸಂಭವಿಸಿದೆ.
ಮಾದಪಟ್ಟಣ ನಿವಾಸಿ ಪದ್ಮಾ (56) ಮೃತಪಟ್ಟ ಮಹಿಳೆ. ಕೆಇಬಿ ನಿವೃತ್ತ ನೌಕರ ಧನವೇಲು ತನ್ನ ಪತ್ನಿಯೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಮಧ್ಯೆ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ರಸ್ತೆಗೆ ಬಿದ್ದ ಮಹಿಳೆ ಮೇಲೆ ಟ್ರ್ಯಾಕ್ಟರ್ ಹರಿದು ಮಹಿಳೆ ಮೃತಪಟ್ಟಿದ್ದು, ಸಣ್ಣಪುಟ್ಟ ಗಾಯಗಳಿಂದ ಧನಮೇಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಶಾಲನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಟ್ರ್ಯಾಕ್ಟರ್ ಚಾಲಕ ಜಯಪಾಲ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.