ಎಲ್ಲಾ ಜಮ್ಮಾ ಜನಾಂಗದ ಫಲಾನುಭವಿಗಳಿಗೆ ಸಮಾನ ಹಕ್ಕು ದೊರೆತ್ತಿಲ್ಲ : ಕೊಡಗು ಗೌಡ ಸಮಾಜಗಳ ಒಕ್ಕೂಟ ಅಭಿಪ್ರಾಯ

23/09/2021

ಮಡಿಕೇರಿ ಸೆ.23 : ಕೊಡಗಿನ ಜಮ್ಮಾ ಹಿಡುವಳಿದಾರರಿಗೆ ನೀಡಲಾದ ಕೋವಿ ಹಕ್ಕು ವಿನಾಯಿತಿ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹೂಡಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ನ್ಯಾಯಾಲಯ ನೀಡಿದ ತೀರ್ಪನ್ನು ಕೊಡಗು ಗೌಡ ಫೆಡರೇಷನ್ ಸ್ವಾಗತಿಸುತ್ತದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ.
ಆದರೆ ಈ ತೀರ್ಪಿನಲ್ಲಿ ಕೊಡಗಿನ ಎಲ್ಲಾ ಜಮ್ಮಾ ಜನಾಂಗದ ಫಲಾನುಭವಿಗಳಿಗೆ ಸಮಾನವಾದ ಹಕ್ಕು ದೊರೆಯದೇ ಇರುವ ಬಗ್ಗೆ ನಿರಾಶೆಯಿದ್ದು, ಉಚ್ಚ ನ್ಯಾಯಾಲಯದ ತೀರ್ಪಿನ ಸಂಪೂರ್ಣ ವಿವರ ಕೈ ಸೇರಿದ ನಂತರ ಮುಂದಿನ ನಮ್ಮ ನಡೆಯ ಬಗ್ಗೆ ಚಿಂತಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.