ಪ್ಲಮ್‌ ಹಣ್ಣಿನ ಸೇವನೆಯ ಉಪಯೋಗಗಳು

25/09/2021

ವಿಶ್ವದಾದ್ಯಂತ ಸೇಬಿನ ಹೊರತಾಗಿ ಹೆಚ್ಚಿನ ಜನರು ಆಯ್ದುಕೊಳ್ಳುವ ಇನ್ನೊಂದು ಹಣ್ಣು ಎಂದರೆ ಪ್ಲಮ್.

ಪ್ಲಮ್‌ಹಣ್ಣಿನಲ್ಲಿ ಆರೋಗ್ಯ ಸಮತೋಲನಕ್ಕೆ ಅತ್ಯವಶ್ಯಕವಾಗಿರುವ ಆ್ಯಂಟಿಯಾಕ್ಸಿಡಂಟ್ ಅಂಶಗಳು ಹೇರಳವಾಗಿವೆ.
ಪ್ಲಮ್ ಹಣ್ಣಿನಲ್ಲಿ ನಾರಿನಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.
ಮಲಬದ್ಧತೆ ತಡೆಯುವಲ್ಲಿ ಇದು ಸಹಕರಿಸುತ್ತದೆ.
ಜೀವಕೋಶಗಳು ಆರೋಗ್ಯಯುತವಾಗಿರಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದೇಹವು ಕಬ್ಬಿಣಂಶವನ್ನು ಹೀರಿಕೊಳ್ಳಲು ನೆರವಾಗುತ್ತದೆ.
ಕ್ಯಾಲೊರಿ ಕಡಿಮೆ ಇರುತ್ತದೆ.
ಲ್ಯೂಟೀನ್‌, ಝಿಕ್ಸಾಂತಿನ್ ಹೆಚ್ಚಿರುವುದರಿಂದ ನರಸಂಬಂಧಿ ಸಮಸ್ಯೆಯನ್ನು ತಡೆಯುವಲ್ಲಿ ಸ್ವಲ್ಪ ಮಟ್ಟಿಗೆ ಉಪಯೋಗವಾಗಬಲ್ಲದು.
ಪ್ಲಮ್‌ ಹಣ್ಣಿನಲ್ಲಿನ ನಿಯಾಸಿನ್, ವಿಟಮಿನ್ ಬಿ6, ಪ್ಯಾಂಟೊಥೆನಿಕ್, ಆ್ಯಸಿಡ್ ಅಂಶಗಳು ಮರೆಗುಳಿತನ (ಅಲ್ಜಮೈರ್) ಸಾಧ್ಯತೆಯನ್ನು ತಪ್ಪಿಸಬಹುದು.
ಮುಪ್ಪಿನ ಲಕ್ಷಣಗಳನ್ನು ಕುಗ್ಗಿಸುತ್ತದೆ.
ಒಂದು ಸಾಮಾನ್ಯ ಗಾತ್ರದ ಪ್ಲಮ್ ಹಣ್ಣಿನಲ್ಲಿ 113 ಮಿ.ಗ್ರಾಂ ಪೊಟಾಷಿಯಂ ಅಂಶವಿದ್ದು, ಅದು ರಕ್ತದ ಏರೊತ್ತಡವನ್ನು ಕಡಿಮೆ ಮಾಡುವುದಲ್ಲದೆ, ಪಾರ್ಶ್ವವಾಯು ಸಾಧ್ಯತೆಯನ್ನು ತಗ್ಗಿಸುತ್ತದೆ.
ಪ್ಲಮ್‌ನಲ್ಲಿನ ಕೆಂಪು ನೀಲಿ ಪಿಗ್ಮೆಂಟ್‌ಗಳು– ಆ್ಯಂಥೊಸಿಯಾನಿನ್‌ಗಳು ಕ್ಯಾನ್ಸರ್‌ಕಾರಕ ಅಂಶಗಳನ್ನು ದೂರವಿರಿಸುತ್ತದೆ.