Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
11:27 PM Tuesday 26-October 2021

ಸೋಮವಾರಪೇಟೆಯಲ್ಲಿ ಕವಿಗೋಷ್ಠಿ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ

25/09/2021

ಮಡಿಕೇರಿ ಸೆ.25 : ಸೋಮವಾರಪೇಟೆಯ ಸೃಷ್ಟಿಯ ಚಿಗುರು ಕವಿ ಬಳಗ ಹಾಗೂ ದೇವಿ ಪ್ರಜ್ವಲ್ ಅವರ ಸಹಭಾಗಿತ್ವದಲ್ಲಿ ಸ್ಥಳೀಯ ಮಹಿಳಾ ಸಮಾಜದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷ ಬಿ.ಸಂಜೀವ ಉದ್ಘಾಟಿಸಿ ಮಾತನಾಡಿ, ಯುವ ಜನಾಂಗ ಸಂಸ್ಕøತಿಯ ಕೊಂಡಿಯನ್ನು ಕಳಚಿಕೊಳ್ಳಬಾರದು. ಎಲ್ಲರಲ್ಲೂ ನಾಡು ನುಡಿ ಸಂಸ್ಕøತಿಯ ಅರಿವು ಸದಾ ಜಾಗೃತವಾಗಿರಬೇಕು ಎಂದರು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ ಉಳಿಯಬೇಕು. ಸರ್ಕಾರವೇ ಕನ್ನಡ ಕಾಯಕ ವರ್ಷ ಎಂದು ಆಚರಣೆ ಮಾಡುತ್ತಿದ್ದು, ಆಡಳಿತದಲ್ಲಿ ಕನ್ನಡಕ್ಕೆ ಪರಿಣಾಮಕಾರಿ ಆದ್ಯತೆ ನೀಡಬೇಕು. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದರು.
ಅತಿಥಿಯಾಗಿ ಭಾಗಿಯಾಗಿದ್ದ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಎ. ಮುರಳೀಧರ್ ಮಾತನಾಡಿ, ಕನ್ನಡ ಭಾಷೆ-ಸಾಹಿತ್ಯದ ಹಿರಿಮೆಯನ್ನು ಸಾರುವಲ್ಲಿ ಸೃಷ್ಟಿಯ ಚಿಗುರು ಕವಿ ಬಳಗದಿಂದ ಹಲವಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆಯನ್ನು ಕವಿ ಬಳಗದ ಅಧ್ಯಕ್ಷ ಕೆ.ಪಿ. ಸುದರ್ಶನ್ ವಹಿಸಿದ್ದರು. ವೇದಿಕೆಯಲ್ಲಿ ಕಸಾಪ ಮಾಜೀ ಗೌರವ ಕಾರ್ಯದರ್ಶಿ ಡಿ.ಪಿ. ಲೋಕೇಶ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎ. ಪ್ರಕಾಶ್, ಮಹಿಳಾ ಸಮಾಜ ಅಧ್ಯಕ್ಷೆ ಸುಮಾ ಸುದೀಪ್ ಅವರುಗಳು ಉಪಸ್ಥಿತರಿದ್ದರು.
ಕೊರೊನಾ ಸಂಕಷ್ಟದಲ್ಲಿ ನಮ್ಮ ಜವಾಬ್ದಾರಿ ಹಾಗೂ ಸಾಹಿತ್ಯದಲ್ಲಿ ಯುವ ಜನತೆಯ ಪಾತ್ರ ವಿಷಯದ ಬಗ್ಗೆ ಕಾರ್ಯಕ್ರಮದ ಪ್ರಾಯೋಜಕರಾದ ದೇವಿ ಪ್ರಜ್ವಲ್ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ. ಶಿವಪ್ರಸಾದ್, ಶಸ್ತ್ರ ಚಿಕಿತ್ಸಕ ಡಾ. ಸತೀಶ್‍ಕುಮಾರ್, ಶುಶ್ರೂಷಕಿ ಬಿ.ಎಂ. ಅನಿತಾ, ‘ಶಕ್ತಿ’ ವರದಿಗಾರ ವಿಜಯ್ ಹಾನಗಲ್, ಕವಯತ್ರಿ ರಾಣಿ ರವೀಂದ್ರ, ಕಸಾಪ ಮಾಜೀ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಸಾಹಿತಿ ನ.ಲ. ವಿಜಯ, ತಾಲೂಕು ಕಸಾಪ ಮಾಜೀ ಅಧ್ಯಕ್ಷ ಹೆಚ್.ಜೆ. ಜವರಪ್ಪ, ಕವಯತ್ರಿ ಅಶ್ವಿನಿ ಕೃಷ್ಣಕಾಂತ್, ನಾವು ಪ್ರತಿಷ್ಠಾನದ ಸಂಚಾಲಕ ಗೌತಮ್ ಕಿರಗಂದೂರು, ಸಮಾಜ ಸೇವಕ ರಾಮದಾಸ್ ಅವರುಗಳನ್ನು ಸನ್ಮಾನಿಸಲಾಯಿತು.