Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
8:58 PM Sunday 17-October 2021

1  ದೇಶ, 1 ದಿನ, 10 ಲಕ್ಷ ಮಂದಿಯ ತಪಾಸಣೆ : ಸೆ.29 ರಂದು ಕೊಡಗಿನಲ್ಲಿ ರೋಟರಿಯಿಂದ ಮಧುಮೇಹ ತಪಾಸಣೆಯ ಬೖಹತ್ ಆಂದೋಲನ

26/09/2021

ಮಡಿಕೇರಿ ಸೆ.26 – ಅಂತರರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಮೂಲಕ ವಿಶ್ವ ಹೖದಯ  ದಿನಾಚರಣೆಯ ಪ್ರಯುಕ್ತ ಸೆ.29 ರಂದು ಕೊಡಗು ಜಿಲ್ಲೆಯಲ್ಲಿ ಮಧುಮೇಹ ತಪಾಸಣಾ ಶಿಬಿರಗಳನ್ನು  ಮಧುಮೇಹ ಸೋಲಿಸಿ ಎಂಬ ಧ್ಯೇಯವಾಕ್ಯದೊಂದಿಗೆ  ಆಯೋಜಿಸಲಾಗುತ್ತಿದ್ದು ಸುಮಾರು  2 ಸಾವಿರ ಮಂದಿಗೆ  ಜಿಲ್ಲೆಯಲ್ಲಿ ಮಧುಮೇಹ ತಪಾಸಣೆ ಕೈಗೊಳ್ಳುವ ಗುರಿ ಇದೆ ಎಂದು ರೋಟರಿ ವಲಯ 6 ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ಮತ್ತು ವಲಯ ಕಾಯ೯ದಶಿ೯ ಎಸ್.ಎಸ್.ವಸಂತ ಕುಮಾರ್ ತಿಳಿಸಿದ್ದಾರೆ.
ಆರೋಗ್ಯ ಸಂಬಂಧಿತ ಯೋಜನೆಗಳಿಗೆ ಆದ್ಯತೆ ನೀಡಿರುವ ರೋಟರಿ ಸಂಸ್ಥೆಯು  ಸೆ.29 ರಂದು ಭಾರತದಾದ್ಯಂತ ಮಧುಮೇಹ ತಪಾಸಣೆಯನ್ನು ಬೖಹತ್ ರೀತಿಯಲ್ಲಿ ಕೈಗೊಳ್ಳುತ್ತಿದ್ದು 1 ದೇಶ, 1 ದಿನ, 10 ಲಕ್ಷ ಮಂದಿಯ ತಪಾಸಣೆ ಎಂಬ ಗುರಿಯೊಂದಿಗೆ ಏಷ್ಯಾಖಂಡದಲ್ಲಿ ಹೊಸ ದಾಖಲೆಗೆ ರೋಟರಿ ಸಂಸ್ಥೆ ಮುಂದಾಗಿದೆ ಎಂದು ಅನಿಲ್ ಮತ್ತು ವಸಂತ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಡಗಿನಲ್ಲಿಯೂ ರೋಟರಿ ಕ್ಲಬ್ ಗಳು ಸೆ.29 ರಂದು ಬುಧವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಧುಮೇಹ ತಪಾಸಣೆಯನ್ನು ಉಚಿತವಾಗಿ ಮಧುಮೇಹ ಸೋಲಿಸಿ ಎಂಬ ವಾಕ್ಯದೊಂದಿಗೆ ಚಳವಳಿ ರೂಪದಲ್ಲಿ ಕೈಗೊಳ್ಳುತ್ತಿವೆ. . ಮಡಿಕೇರಿ ರೋಟರಿ, ಮಡಿಕೇರಿ ಮಿಸ್ಟಿ ಹಿಲ್ಸ್, ಗೋಣಿಕೊಪ್ಪ ರೋಟರಿ, ಶನಿವಾರಸಂತೆ ರೋಟರಿ, ವಿರಾಜಪೇಟೆ ರೋಟರಿ, ಕುಶಾಲನಗರ ರೋಟರಿ ವತಿಯಿಂದ ಮಧುಮೇಹ ತಪಾಸಣೆ ಶಿಬಿರಗಳು ಬುಧವಾರ ವಿವಿಧ ಪ್ರದೇಶಗಳಲ್ಲಿ ಜರುಗಲಿದ್ದು ಸಾವ೯ಜನಿಕರು ಶಿಬಿರದ ಪ್ರಯೋಜನ ಪಡೆಯುವಂತೆ ಅನಿಲ್ ಕೋರಿದ್ದಾರೆ.
ಭಾರತದಾದ್ಯಂತ ಮಧುಮೇಹವನ್ನು ತೊಡೆದುಹಾಕುವ ಉದ್ದೇಶದಿಂದ ಮಧುಮೇಹದ ಬಗ್ಗೆ ಜನರಲ್ಲಿ ಜಾಗೖತಿ ಉಂಟು ಮಾಡುವ ನಿಟ್ಟಿನಲ್ಲಿ ಈ ಶಿಬಿರವನ್ನು ರೋಟರಿ ಸಂಸ್ಥೆಗಳು ದೇಶವ್ಯಾಪಿ ಆಯೋಜಿಸುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ.  ಮೊದಲ ಹಂತದಲ್ಲಿ ಮಧುಮೇಹ ತಪಾಸಣೆ ನಡೆಸಲಾಗುತ್ತದೆ.  ಬಳಿಕ ಮಧುಮೇಹ ತಡೆಯುವ ಜಾಗೖತಿ ಮಾಹಿತಿ ನೀಡಲಾಗುತ್ತದೆ. ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಧುಮೇಹಿಗಳಿದ್ದಾರೆ.   ಸೈಲೆಂಟ್ ಕಿಲ್ಲರ್ ಎನಿಸಿರುವ ಮಧುಮೇಹ ತಮಗೆ ಇದೆ ಎಂದೇ ಹಲವರಿಗೆ  ತಿಳಿದಿರುವುದಿಲ್ಲ. . ಬೇರೆ ಕಾಯಿಲೆಗಳಿಂದ ಆಸ್ಪತ್ರೆಗೆ  ತೆರಳಿ ತಪಾಸಣೆ ಕೈಗೊಂಡಾಗ ಮಧುಮೇಹ ಇರುವುದು ಖಚಿತವಾಗುತ್ತದೆ. ಹೀಗಾಗಿ ಪ್ರಾರಂಭಿಕ ಹಂತದಲ್ಲಿಯೇ ಮಧುಮೇಹವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಮೂಲಕ ಮಧುಮೇಹ ನಿವಾರಣೆಗೆ ರೋಟರಿ ಸಂಸ್ಥೆ ಈ ಕಾಯ೯ಕ್ರಮ ಆಯೋಜಿಸುತ್ತಿರುವುದಾಗಿಯೂ ಅನಿಲ್ ಮತ್ತು ವಸಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಧುಮೇಹವನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿದ್ದೇ ಆದಲ್ಲಿ  ಇದರ ನಿಯಂತ್ರಣ ಸುಲಭವಾಗಲಿದೆ. ಮಧುಮೇಹ ಪತ್ತೆಯಾದರೂ ಆತಂಕಪಡುವ ಅಗತ್ಯವಿಲ್ಲ. ಆಹಾರ ಕ್ರಮ ಮತ್ತು ಜೀವನ ಶೈಲಿಯ ಬದಲಾವಣೆ ಮೂಲಕ ಮಧುಮೇಹ ನಿಯಂತ್ರಣ ಸಾಧ್ಯವಿದೆ, ದೇಹದ ಮೇಲೆ ಇದರಿಂದ ಉಂಟಾಗುವ ಮತ್ತಷ್ಟು ದುಷ್ಪರಿಣಾಮವನ್ನು ಪ್ರಾರಂಭಿಕ ಹಂತದಲ್ಲಿಯೇ ತಪ್ಪಿಸಬಹುದಾಗದೆ  ಎಂದೂ ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆ.