ಚೆಟ್ಟಳ್ಳಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಸೇತು ಪುಸ್ತಕಗಳ ಕೊಡುಗೆ

11/10/2021

ಮಡಿಕೇರಿ. ಅ.11 : ಚೆಟ್ಟಳ್ಳಿಯ   ಪ್ರೌಡಶಾಲೆಯ ಎಸ್.ಎಸ್.ಎಲ್.ಸಿ    ವಿದ್ಯಾಥಿ೯ಗಳಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿದ್ಯಾಸೇತು ಮಾಗ೯ದಶಿ೯ ಪುಸ್ತಕಗಳನ್ನು ನೀಡಲಾಯಿತು.
ಶಾಲಾ ಸಭಾಂಗಣದಲ್ಲಿ ಜರುಗಿದ   ಕಾಯ೯ಕ್ರಮದಲ್ಲಿ ವಿದ್ಯಾಸೇತು  ಮಾಗ೯ದಶಿ೯ ಪುಸ್ತಕಗಳನ್ನು ವಿತರಿಸಿ ಮಾತನಾಡಿದ  ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ.   ರೋಟರಿ ಸಂಸ್ಥೆಗಳ ವತಿಯಿಂದ  ಈ ವಷ೯ ಮಹತ್ವದ ಶೈಕ್ಷಣಿಕ ಯೋಜನೆಯಾಗಿ ವಿದ್ಯಾಸೇತು ಹೆಸರಿನ  ಮಾಗ೯ದಶಿ೯ ಪುಸ್ತಕಗಳನ್ನು 10 ನೇ ತರಗತಿ ವಿದ್ಯಾಥಿ೯ಗಳಿಗೆ ವಿತರಿಸಲಾಗುತ್ತಿದೆ. ಕೊಡಗು ಜಿಲ್ಲೆಯ  ವಿವಿಧ ಶಾಲೆಗಳ 3 ಸಾವಿರ ವಿದ್ಯಾಥಿ೯ಗಳು  ವಿದ್ಯಾಸೇತು ಪ್ರಯೋಜನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.   ಚೆಟ್ಟಳ್ಳಿ ಶಾಲಾ ವಿದ್ಯಾಥಿ೯ಗಳಿಗೆ ವಿದ್ಯಾಸೇತು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಚೆಟ್ಟಳ್ಳಿಯ ಚೇತನ ಸಂಘದ ಸದಸ್ಯರಿಗೆ ಅನಿಲ್ ಅಭಿನಂದನೆ ಸಲ್ಲಿಸಿದರು. ಈ ಮಾಗ೯ದಶಿ೯ ಪುಸ್ತಕದ ಪ್ರಯೋಜನ ಪಡೆದ  ವಿದ್ಯಾಥಿ೯ಗಳು ಇದೇ ಪುಸ್ತಕಗಳನ್ನು ಮುಂದಿನ ವಷ೯ದ ವಿದ್ಯಾಥಿ೯ಗಳಿಗೆ ಹಸ್ತಾಂತರಿಸಬೇಕಾಗಿದೆ ಎಂದೂ ಅವರು ಮನವಿ ಮಾಡಿದರು.
ಚೆಟ್ಟಳ್ಳಿ ಚೇತನ ಸಂಘದ ಅಧ್ಯಕ್ಷ  ಸುರೇಶ್ ಬಾಬು ಮಾತನಾಡಿ, ಚೆಟ್ಟಳ್ಳಿಯಲ್ಲಿ ಚೇತನ ಸಂಘವು ಸಾಮಾಜಿಕ ಸೇವಾ  ಕಾಯ೯ಗಳಿಗಾಗಿ  ಅನೇಕ ಯೋಜನೆ ರೂಪಿಸಿದ್ದು,  ಈ ನಿಟ್ಟಿನಲ್ಲಿ ರೋಟರಿ ಸಹಯೋಗದಲ್ಲಿ ವಿದ್ಯಾಸೇತು ಪುಸ್ತಕಗಳನ್ನೂ ಶಾಲೆಯ ವಿದ್ಯಾಥಿ೯ಗಳಿಗೆ ನೀಡಲಾಗಿದೆ ಎಂದರು. ಚೇತನ ಸಂಘದ ಕಾಯ೯ದಶಿ೯ ಪ್ರವೀಣ್, ಸಂಚಾಲಕರಾದ ಉಮೇಶ್, ರವಿ   , ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ,  ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಕ್ಯಾರಿ ಕಾಯ೯ಪ್ಪ ಹಾಜರಿದ್ದರು. ಅಧ್ಯಾಪಕಿ ಸುನಂದ ಸ್ವಾಗತಿಸಿದರು.