Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
11:13 PM Tuesday 26-October 2021

ಮಡಿಕೇರಿ ದಸರಾ ಜನೋತ್ಸವಕ್ಕೆ ಅಂತಿಮ ಸಿದ್ಧತೆ : ದಶಮಂಟಪ ಸಮಿತಿಗಳ ಉತ್ಸಾಹಕ್ಕೆ ಭಂಗ ತರಬೇಡಿ : ದಸರಾ ಸಮಿತಿ ಮನವಿ

13/10/2021

ಮಡಿಕೇರಿ ಅ.13 : ಮಡಿಕೇರಿ ದಸರಾವನ್ನು ಈ ಬಾರಿ ಸರಳವಾಗಿ ಆಚರಿಸುತ್ತಿದ್ದು, ಅ.15ರ ಸಂಜೆ 6 ಗಂಟೆಯಿoದ ಅ.16ರ ಬೆಳಗಿನ ವರೆಗೆ ದಶಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್ ರಮೇಶ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್. ರಮೇಶ್ ಸರಕಾರ ಮಡಿಕೇರಿ ದಸರಾಕ್ಕೆ 1 ಕೋಟಿ ರೂ. ಅನುದಾನ ನೀಡಿದೆ. ಈ ಪೈಕಿ 25 ಲಕ್ಷ ರೂ.ಗಳನ್ನು ದಸರಾಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇನ್ನುಳಿದ 75 ಲಕ್ಷ ರೂ.ಗಳನ್ನು ನಗರದ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ ಎಂದು ಹೇಳಿದರು. ಆಯುಧ ಪೂಜೆ ಮತ್ತು ದಸರಾ ಹಬ್ಬದಲ್ಲಿ ಯಾವುದೇ ರೀತಿಯ ಸಭಾ ಕಾರ್ಯಕ್ರಮಗಳನ್ನು ಈ ಬಾರಿ ಆಯೋಜಿಸುತ್ತಿಲ್ಲ ಎಂದು ರಮೇಶ್ ಹೇಳಿದರು.
ಅ.15ರಂದು ರಾತ್ರಿ ದಂಡಿನ ಮರಿಯಮ್ಮ ದೇವಾಲಯಕ್ಕೆ ಶಕ್ತಿ ದೇವತೆಗಳ ಕರಗಗಳು ಆಗಮಿಸಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬಳಿಕ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿದು ದೇವಾಲಯಗಳಿಗೆ ಮರಳುತ್ತವೆ. ಶೋಭಾಯಾತ್ರೆ ನಡೆಸುವ ದಶ ಮಂಟಪಗಳು ಅ.16ರ ಬೆಳಗಿನ ವೇಳೆ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಕಾರ್ಯ ನಡೆಸುತ್ತವೆ ಎಂದು ಹೇಳಿದರು. ಮಹದೇವಪೇಟೆ ಮಾರ್ಗವಾಗಿ ಶೋಭಾಯಾತ್ರೆ ನಡೆಯಲಿದ್ದು, ಗಣಪತಿ ಬೀದಿಗಾಗಿ ಮಂಟಪಗಳು ಮತ್ತೆ ತಮ್ಮ ಸ್ಥಾನಕ್ಕೆ ಆಗಮಿಸುತ್ತವೆ. ಈ ಹಿನ್ನೆಲೆಯಲ್ಲಿ ಅ.15ರ ಸಂಜೆ 5 ಗಂಟೆಯ ಬಳಿಕ ನಗರದೊಳಗೆ ಜನರಿಗೆ ತೊಂದರೆಯಾಗದ ರೀತಿಯಲ್ಲಿ ವಾಹನ ಸಂಚಾರ ನಿಯಂತ್ರಿಸುವುದು ಹಾಗೂ ಶೋಭಾಯಾತ್ರೆ ತೆರಳುವ ರಸ್ತೆ ಬದಿಯಲ್ಲಿ ಎಲ್ಲಾ ವಾಹನಗಳ ಪಾರ್ಕಿಂಗ್ ಅನ್ನು ತೆರವು ಮಾಡಲು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಕೆ.ಎಸ್. ರಮೇಶ್ ಮನವಿ ಮಾಡಿದರು. ಗಣಪತಿ ಬೀದಿಯ ರಸ್ತೆ ಗುಂಡಿ ಮುಚ್ಚಲು ನಗರ ಸಭೆಗೆ ಸೂಚಿಸಲಾಗಿದ್ದು, ಕಾಮಗಾರಿ ಅ.15 ರೊಳಗೆ ಪೂರ್ಣಗೊಳ್ಳುತ್ತದೆ ಎಂದು ಕೆ.ಎಸ್.ರಮೇಶ್ ಹೇಳಿದರು.
ದಶ ಮಂಟಪಗಳು ಶೋಭಾಯಾತ್ರೆಯನ್ನು ನೋಡಲು ಆಗಮಿಸುವವರು ಕೋವಿಡ್ ನಿಯಮಗಳನ್ನು ಪಾಲಿಸಬೇಕು, ಗುಂಪು ಸೇರದೆ ಸಾಮಾಜಿಕ ಅಂತರ ಕಾಪಾಡಿಕೊಂಡು ದಶ ಮಂಟಪಗಳ ಶೋಭಾಯಾತ್ರೆಯನ್ನು ವೀಕ್ಷಿಸುವಂತೆ ರಮೇಶ್ ಮನವಿ ಮಾಡಿದರು. ಈ ಸಂದರ್ಭ ಮಡಿಕೆರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಶ್ವೇತ ಪ್ರಶಾಂತ್ ಉಪಸ್ಥಿತರಿದ್ದರು.
::: ಸಂಘರ್ಷ ಬೇಡ :::
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಮ್ಮುಖದಲ್ಲಿ ಅಧಿಕಾರಿಗಳನ್ನು ಒಳಗೊಂಡ ಸಭೆ ನಡೆಸಿ ದಶ ಮಂಟಪಕ್ಕೆ ಒಂದು ಟ್ರ್ಯಾಕ್ಟರ್ ಮತ್ತು ಒಂದು ಸೌಂಡ್ ಸಿಸ್ಟಮ್ ವಾಹನ ಅಳವಡಿಸಲು ಅವಕಾಶ ನೀಡಲಾಗಿದೆ. ಆದರೆ ಪೊಲೀಸ್ ಇಲಾಖೆ ಸೌಂಡ್ ಸಿಸ್ಟಮ್ ಬದಲು ಬ್ಯಾಂಡ್ ಸೆಟ್ ಬಳಸುವಂತೆ ಹೇಳಿದೆ. ಯಾವ ದಶ ಮಂಟಪಗಳು ಪೊಲೀಸ್ ಇಲಾಖೆಯ ಸೂಚನೆಯನ್ನು ಒಪ್ಪಲು ತಯಾರಿಲ್ಲ. ದಶ ಮಂಟಪಗಳ ಸಭೆಯಲ್ಲಿಯೂ ಈ ಕುರಿತು ತೀರ್ಮಾನವಾಗಿದ್ದು, ಸಚಿವರ ಸಭೆಯಲ್ಲಾದ ನಿರ್ಧಾರದಂತೆ ಶೋಭಾಯಾತ್ರೆ ನಡೆಯಲಿದೆ. ಈಗಾಗಲೇ ಮಂಟಪಗಳ ತಯಾರಿ ಕಾರ್ಯ ಭರದಿಂದ ನಡೆಯುತ್ತಿದೆ. ದಶ ಮಂಟಪಗಳಲ್ಲಿ ಚಲನ ವಲನ ಅಳವಡಿಸಿಕೊಳ್ಳುವುದು ಮಂಟಪ ಸಮಿತಿಗಳ ನಿರ್ಧಾರವಾಗಿದೆ. ಅಧಿಕಾರಿಗಳು, ಜಿಲ್ಲಾಡಳಿತ ಇದಕ್ಕೆ ಅವಕಾಶ ಮಾಡಿಕೊಡಬೇಕು. ದಶ ಮಂಟಪಗಳ ಸಾವಿರಾರು ಯುವಕರ ಮನಸ್ಸಿಗೆ ನೋವು ಉಂಟು ಮಾಡಲುವ ಪ್ರಯತ್ನ ಬೇಡ. ಶೋಭಾಯಾತ್ರೆ ಸಂದರ್ಭ ಯಾವುದೇ ಸಂಘರ್ಷಗಳಿಗೂ ಅವಕಾಶ ಮಾಡಿಕೊಡುವುದು ಬೇಡ ಎಂದು ಕೆ.ಎಸ್.ರಮೇಶ್ ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ದಸರಾ ಅನುದಾನದಲ್ಲಿ ಎಲ್ಲಾ 10 ಮಂಟಪಗಳಿಗೆ ತಲಾ 1.30 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಅದರಂತೆ 4 ಶಕ್ತಿ ದೇವತೆಗಳ ಕರಗಳಿಗೂ ಕೂಡ 1.30 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ನಗರದ ಅಲಂಕಾರ ಮತ್ತು ಇತರ ಖರ್ಚುಗಳಿಗಾಗಿ 6 ಲಕ್ಷ ರೂ.ಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು.