ವಿರಾಜಪೇಟೆ : ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಿಶೇಷ ಪೂಜೆ

13/10/2021

ಮಡಿಕೇರಿ ಅ.13 : ವಿರಾಜಪೇಟೆಯ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿರುವ ದುರ್ಗಾ ಮಾತೆಯ ಗುಡಿಯಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾ ಪೂಜೆಯು ನಡೆಯಿತು.
ಬೆಳಿಗ್ಗೆನಿಂದಲೇ ಪೂಜಾ ಕಾರ್ಯಕ್ರಮವು ಆರಂಭಗೊಂಡು ವಿಶೇಷವಾಗಿ ಕುಂಕುಮಾರ್ಚನೆ, ಪುಷ್ಪಾರ್ಚನೆ, ದುರ್ಗಾ ಶ್ಲೋಕ ಪಠಣ, ಭಜನೆ, ನೈವೇದ್ಯ ಸಮರ್ಪಣೆ ಹಾಗೂ ದೇವಿಗೆ ವಿಶೇಷ ಪೂಜಾ ಸೇವೆಗಳನ್ನು ಸಮರ್ಪಿಸಲಾಯಿತು.
ಮಹಾ ಮಂಗಳಾರತಿಯ ಬಳಿಕ ಪ್ರಸಾದ ವಿತರಣೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಿತು. ಬೇಟೋಳಿ ಹಾಗೂ ಸಮೀಪದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.