Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
11:37 PM Tuesday 26-October 2021

ಸೋಮವಾರಪೇಟೆ : ರಸ್ತೆ ಕಾಮಗಾರಿ ಕಳಪೆ : ಮೂವರು ಇಂಜಿನಿಯರ್‌ಗಳಿoದ 7.45 ಲಕ್ಷ ರೂ. ವಸೂಲಿ ಮಾಡಲು ಆದೇಶ

13/10/2021

ಸೋಮವಾರಪೇಟೆ ಅ.13 : ರಸ್ತೆ ಕಳಪೆ ಕಾಮಗಾರಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಅಂದು ಕಾರ್ಯನಿರ್ವಹಿಸಿದ್ದ ಮೂವರು ಇಂಜಿನಿಯರ್‌ಗಳಿoದ 7,45,539 ರೂ.ಗಳನ್ನು ವಸೂಲಿ ಮಾಡಲು ಸರ್ಕಾರ ಅ.11ರಂದು ಆದೇಶ ಹೊರಡಿಸಿದೆ.
2012 ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿದ ಯಡೂರು, ಮಾವಿನಕಟ್ಟೆ, ಬಾರ್ಲಗದ್ದೆ, ಹರಗ, ಕಿಕ್ಕರಳ್ಳಿ ರಸ್ತೆಯ ಕಾಮಗಾರಿಯನ್ನು ಬೆಂಗಳೂರಿನ ಗುತ್ತಿಗೆದಾರ ವಸಂತ ಎಂಬವರು 28,72,758 ರೂ.ಗಳಿಗೆ ಟೆಂಡರ್ ಪಡೆದಿದ್ದು ನಂತರ ಅದನ್ನು ಉದಯ ರವರು ಸಬ್ ಕಾಂಟ್ರಾಕ್ಟ್ ತೆಗೆದುಕೊಂಡು ಕಾಮಗಾರಿಯನ್ನು ನಿರ್ವಹಿಸಿದ್ದರು.
ಕಾಮಗಾರಿ ಕಳಪೆಯಾಗಿದೆ ಎಂದು ಹರಗ ಗ್ರಾಮದ ಡಾಲಿ ಪ್ರಕಾಶ್ ರವರು 2012ನೆ ಇಸವಿಯಲ್ಲಿ ಲೋಕಾಯುಕ್ತಕ್ಕೆ ದೂರನ್ನು ಸಲ್ಲಿಸಿದ್ದರು .ಈ ಬಗ್ಗೆ ಅಂದು ತನಿಖೆ ನಡೆಸಿದ್ದ ಲೋಕಾಯುಕ್ತ ತಂಡವು ದುರುಪಯೋಗವಾದ ಹಣವನ್ನು ಅಧಿಕಾರಿಗಳಿಂದ ವಸೂಲಿ ಮಾಡುವಂತೆ ಸರ್ಕಾರಕ್ಕೆ ವರದಿಯೊಂದಿಗೆ ಶಿಫಾರಸ್ಸು ಮಾಡಿತ್ತು. ನಂತರ ಅಧಿಕಾರಿಗಳು ಮೇಲ್ಮನವಿಯನ್ನು ಸಲ್ಲಿಸಿದ್ದರು. ಮೇಲ್ಮನವಿ ಆಲಿಸಿದ ನಂತರ ಸರ್ಕಾರವು ಲೋಕಾಯುಕ್ತರ ಶಿಫಾರಸ್ಸನ್ನು ಎತ್ತಿಹಿಡಿದು ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಂಜಪ್ಪ ಅ.11 ರಂದು ಆದೇಶ ನೀಡಿದ್ದಾರೆ.
ಅಂದಿನ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಟಿ.ಹೆಚ್ ಲಿಂಗರಾಜ್(ಈಗ ನಿವೃತ್ತಿ ಹೊಂದಿದ್ದಾರೆ) 2,79,578 ರೂ., ಈಗ ಜಿಲ್ಲಾ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಭಿಯಂತರರಾದ ಭಾಸ್ಕರ್ 2,79,577 ರೂ., ಮತ್ತು ಅಂದಿನ ಕಾರ್ಯಪಾಲ ಅಭಿಯಂತರ ದೊಡ್ಡ ಸಿದ್ದಯ್ಯ(ಈಗ ನಿವೃತ್ತಿ) 1,86,384 ರೂ.ಗಳನ್ನು ಇವರಿಂದ ವಸೂಲಿ ಮಾಡುವಂತೆ ಆದೇಶಿಸಿದೆ.
ಅಭಿಪ್ರಾಯ
ರಸ್ತೆ ಕಾಮಗಾರಿ ಕಳಪೆಯಾಗಿರುವುದನ್ನು ಗಮನಿಸಿ ನಮ್ಮ ತಂಡದ ಹರಗ ಗ್ರಾಮದ ಡಾಲಿ ಪ್ರಕಾಶ್ ದೂರು ನೀಡಿದ್ದರು. ಲೋಕಾಯುಕ್ತರು ಸ್ಥಳಪರಿಶೀಲನೆ ಮಾಡಿ ಸೂಕ್ತ ರೀತಿಯಲ್ಲಿ ತನಿಖೆ ಮಾಡಿದ್ದಾರೆ. ಅಂದಾಜು ಪಟ್ಟಿಯಂತೆ ಕೆಲಸಗಳು ಆಗುತ್ತಿಲ್ಲ. ಬಹುತೇಕ ಕಾಮಗಾರಿ ಕಳೆಪೆಯಾಗಿ ಬಾಳಿಕೆ ಬರುತ್ತಿಲ್ಲ. ಕೇಳುವವರೆ ಇಲ್ಲದಂತಾಗಿದೆ.ಕೆಲವು ಕಡೆ ಕಾಮಗಾರಿ ನಿರ್ವಹಿಸಿದೆ ಬಿಲ್ ಮಾಡಲಾಗುತ್ತಿದೆ.
-ಬಿ.ಪಿ.ಅನಿಲ್ ಕುಮಾರ್, ಆರ್.ಟಿ.ಐ.ಕಾರ್ಯಕರ್ತ, ಸೋಮವಾರಪೇಟೆ