ಸೋಮವಾರಪೇಟೆ : ಶರನ್ನವರಾತ್ರಿ ಉತ್ಸವ ಸಂಪನ್ನ

17/10/2021

ಸೋಮವಾರಪೇಟೆ ಅ.17 : ಶರನ್ನವರಾತ್ರಿ ಉತ್ಸವಕ್ಕೆ ಸಾಂಪ್ರದಾಯಿಕ ತೆರೆ.
ಕಳೆದ ಹತ್ತು ದಿನಗಳಿಂದ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ವೀರಶೈವ ಸಮಾಜ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ,ಅಕ್ಕನಬಳಗ, ಬಸವೇಶ್ವರ ಯುವಕಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿದ್ದ ಶರನ್ನವ ರಾತ್ರಿ ಉತ್ಸವ ಬನ್ನಿ ಮುಡಿಯುವುದರೊಂದಿಗೆ ಸಾಂಪ್ರದಾಯಿಕ ತೆರೆಕಂಡಿತು.
ದೇವಾಲಯದ ಆವರಣದಲ್ಲಿ ಅರ್ಚಕ ಮಿಥುನ್ ಶಾಸ್ತ್ರಿ  ಬಾಳೆಕಂಬ ಕಡಿದು ದೇವಿಗೆ ಉಯಾಲೋತ್ಸವ ನಡೆಸಿ ಎಲ್ಲಾರಿಗೂ ಬನ್ನಿ ಪತ್ರೆ ವಿತರಿಸಿದರು. ದೇವಿಗೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು. ಈ ಧಾರ್ಮಿಕ ಕಾರ್ಯದಲ್ಲಿ  ನೂರಾರುಮಂದಿ ಪಾಲ್ಗೊಂಡು ಕೃತಾರ್ತರಾದರು.