ತಲಕಾವೇರಿ : ವಿವಿಧ ಸಂಘ, ಸಂಸ್ಥೆಗಳಿಂದ ಅನ್ನದಾನ

17/10/2021

ಮಡಿಕೇರಿ ಅ.17 : ತುಲಾಸಂಕ್ರಮಣ ಹಿನ್ನೆಲೆ ಕೊಡಗು ಏಕೀಕರಣ ರಂಗ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ತಲಕಾವೇರಿಯಲ್ಲಿ ಸಹಸ್ರಾರು ಮಂದಿಗೆ ಅನ್ನದಾನ ನಡೆಸಿತು.
ರಂಗದ ಪ್ರಮುಖರಾದ ತಮ್ಮು ಪೂವಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಇಂದು ಮತ್ತು ಅ.18 ರಂದು ಎರಡು ದಿನಗಳ ಕಾಲ ಅನ್ನದಾನ ನಡೆಯಲಿದೆ. ಈ ಬಾರಿ ಕೊಏರದಿಂದ 26 ನೇ ವರ್ಷದ ಅನ್ನದಾನ ನಡೆಯುತ್ತಿದ್ದು, ಕಳೆದ ಕೆಲ ವರ್ಷದಿಂದ ‘ಕೊಡಗು ಗೌಡ ಯುವ ವೇದಿಕೆ’ಯೂ ಕೈ ಜೋಡಿಸಿದೆ ಎಂದು ಮಾಹಿತಿ ನೀಡಿದರು.
ಬೆಳಗ್ಗೆ ಇಡ್ಲಿ, ವಡೆ, ಪಲಾವ್ ಉಪಾಹಾರವನ್ನು ಸುಮಾರು 2 ಸಾವಿರ ಮಂದಿಗೆ, ಮಧ್ಯಾಹ್ನ ಅನ್ನ ಸಾಂಬಾರ್ ಮತ್ತು ಪಾಯಸ ಪ್ರಸಾದವನ್ನು ಸುಮಾರು 3 ರಿಂದ 5 ಸಾವಿರ ಮಂದಿಗೆ ವಿತರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಭsಕ್ತಾದಿಗಳು ಪ್ರಸಾದ ಸ್ವೀಕರಿಸಿ ಧನ್ಯತಾ ಭಾವದಿಂದ ತೆರಳುತ್ತಿರುವುದಾಗಿ ಸಂತಸ ವ್ಯಕ್ತಪಡಿಸಿದರು.
::: ಬಿಗಿ ಪೊಲೀಸ್ ಬಂದೋಬಸ್ತ್ :::
ತುಲಾಸಂಕ್ರಮಣ ಜಾತ್ರೆಯನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ 450 ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳು, ಮೂವರು ಡಿವೈಎಸ್‌ಪಿಗಳು, 7 ಮಂದಿ ವೃತ್ತ ನಿರೀಕ್ಷಕರು, 12 ಮಂದಿ ಪೊಲೀಸ್ ಎಸ್‌ಐಗಳು ಮತ್ತು ಕೆಎಸ್‌ಆರ್‌ಪಿ ಮತ್ತು ಡಿಎಆರ್‌ನ 5 ತುಕಡಿಗಳನ್ನು ನಿಯೋಜಿಸಲಾಗಿತ್ತು.