ಕಾಲ್ನಡಿಗೆಯಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ ಕೊಡವ ಸಂಘಟನೆಗಳ ಸದಸ್ಯರು

17/10/2021

ಮಡಿಕೇರಿ ಅ.17 : ತುಲಾ ಸಂಕ್ರಮಣದ ಪವಿತ್ರ ತೀರ್ಥೋದ್ಭವದಲ್ಲಿ ಪಾಲ್ಗೊಳ್ಳಲು ವಿವಿಧ ಕೊಡವ ಸಂಘಟನೆಗಳ ಸದಸ್ಯರು ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಮಂಡಲದಿoದ ತಲಕಾವೇರಿಗೆ ಆಗಮಿಸಿ ಗಮನ ಸೆಳೆದರು.
ಅಖಿಲ ಕೊಡವ ಸಮಾಜ, ಕನೆಕ್ಟಿಂಗ್ ಕೊಡವ ಸಂಘ, ಕೊಡವ ರೈಡರ್ಸ್, ಕೊಡವ ಮಕ್ಕಡ ಕೂಟ ಸೇರಿದಂತೆ ಹತ್ತು ಹಲ ಸಂಘಟನೆಗಳ ನೂರಾರು ಮಂದಿ ಭಾನುವಾರ ಬೆಳಗ್ಗೆ ಭಾಗಮಂಡಲದಿAದ 8 ಕಿ.ಮೀ. ದೂರದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ತೆರಳಿ, ತೀರ್ಥೋದ್ಭವಕ್ಕೆ ಸಾಕ್ಷಿಯಾದರು.
::: ದುಡಿಕೊಟ್ಟ್ ಪಾಟ್ :::
ಮಡಿಕೇರಿ ನಗರದ ಅಂಚಿನ ಕಳಕೇರಿ ನಿಡುಗಣೆಯ ಕರವಲೆ ಬಾಡಗ ಶ್ರೀ ಭಗವತಿ ಮಹಿಷಮರ್ಧಿಸಿ ದೇವಸ್ಥಾನದ ಪ್ರಮುಖರು ಎಂ.ಬಿ.ದೇವಯ್ಯ ಅವರ ನೇತೃತ್ವದಲ್ಲಿ ತಲಕಾವೇರಿಯ ತೀರ್ಥೋದ್ಭವ ಸಂದರ್ಭ ದುಡಿ ಕೊಟ್ಟ್ ಪಾಟ್ ಸಾಂಪ್ರದಾಯಿಕ ಆಚರಣೆ ನಡೆಸಿಕೊಡುವ ಮೂಲಕ ಸರ್ವರ ಮೆಚ್ಚುಗೆಗೆ ಪಾತ್ರರಾದರು.