ಕೂದಲು ಹಾಗೂ ತ್ವಚೆಯ ಸೌಂದರ್ಯಕ್ಕೆ ಕಾಫಿ ಪೌಡರ್‌ ಪ್ಯಾಕ್

18/10/2021

ಕಾಫಿಯನ್ನು ಕುಡಿಯುವ ಜತೆಗೆ ಅದನ್ನು ಕೂದಲು ಹಾಗೂ ತ್ವಚೆಯ ಸೌಂದರ್ಯಕ್ಕೆ ಬಳಕೆ ಮಾಡಬಹುದು. ಇದು ತ್ವಚೆ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುವ ಜತೆಗೆ ಕಾಂತಿ ಕೂಡ ನೀಡುವುದು. ಆಂಟಿಆಕ್ಸಿಡೆಂಟ್ ಅಧಿಕವಾಗಿ ಇರುವಂತಹ ಕಾಫಿಯನ್ನು ವಿವಿಧ ರೀತಿಯಿಂದ ಫೇಸ್ ಪ್ಯಾಕ್ ಮತ್ತು ಕ್ರೀಮ್‌ಗಳಲ್ಲಿ ಬಳಕೆ ಮಾಡುವರು.

ಕಣ್ಣಿನ ಸುತ್ತಲು ಮತ್ತು ಮುಖವು ಊದಿಕೊಂಡಿದ್ದರೆ ಆಗ ಅದು ಸೌಂಧರ್ಯ ಕೆಡಿಸುವುದು. ಅತಿಯಾಗಿ ಬಳಲಿದರೆ ಅಥವಾ ನಿದ್ರೆಯ ಸಮಸ್ಯೆಯಿಂದಾಗಿ ಹೀಗೆ ಆಗುವುದು. ಕಾಫಿಯಲ್ಲಿ ಇರುವಂತಹ ಕೆಫಿನ್ ಅಂಶವು ಮುಖದಲ್ಲಿನ ಊದುವಿಕೆ ಕಡಿಮೆ ಮಾಡುವುದು. ಇದೇ ರೀತಿಯಲ್ಲಿ ರಕ್ತ ಸಂಚಾರವನ್ನು ಉತ್ತಮಪಡಿಸುವುದು.

ಕಾಫಿ ಹುಡಿ ಅಥವಾ ಕಾಫಿಯನ್ನು ತೆಗೆದುಕೊಂಡು ಅದನ್ನು ಐಸ್ ಟ್ರೇಗೆ ಹಾಕಿ ನೀರು ಹಾಕಿ ಫ್ರೀಜರ್ ನಲ್ಲಿ ಇಡಬೇಕು. ಇದನ್ನು ತೆಗೆದ ಬಳಿಕ ಅದರಿಂದ ಮುಖಕ್ಕೆ ಸರಿಯಾಗಿ ಮಸಾಜ್ ಮಾಡಿದರೆ ಆಗ ಮುಖ ಊದಿಕೊಂಡಿರುವುದು ದೂರವಾಗುವುದು ಮತ್ತು ರಕ್ತ ಸಂಚಾರವು ಉತ್ತಮವಾಗುವುದು.

ಕಾಫಿಯ ಹರಳುಗಳನ್ನು ಹಾಗೆ ಇದರ ಮೇಲೆ ಸ್ಕ್ರಬ್ ಮಾಡಿದರೆ ಅದರಿಂದ ಸೆಲ್ಯೂಲೈಟ್ ನ ಸಮಸ್ಯೆಯು ಕಡಿಮೆ ಆಗುವುದು. ಕಾಫಿಯಿಂದ ಸರಿಯಾದ ರೀತಿಯಲ್ಲಿ ಸ್ಕ್ರಬ್ ಮಾಡಿದರೆ ಅದರಿಂದ ರಕ್ತ ಸಂಚಾರವು ಉತ್ತೇಜಿತವಾಗುವುದು.

½ ಕಪ್ ಕಾಫಿ ಹರಳಿನೊಂದಿಗೆ ಮಾಡುತ್ತಲಿದ್ದರೆ, ಆಗ ಅದಕ್ಕೆ ಒಂದು ಚಮಚ ಕಲ್ಲುಪ್ಪು ಅಥವಾ ಸಕ್ಕರೆ ಹಾಕಿ. 2-3 ಚಮಚ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆ ಹಾಕಿಕೊಂಡು ಸ್ಕ್ರಬ್ ಮಾಡಿ. ಸ್ಕ್ರಬ್ ಮಾಡಿದ ಬಳಿಕ ಅದಕ್ಕೆ ಪ್ಲಾಸ್ಟಿಕ್ ಹಾಕಿ ಹಾಗೆ 10 ನಿಮಿಷ ಕಾಲ ಬಿಡಿ. ಇದರ ಬಳಿಕ ಪ್ಲಾಸ್ಟಿಕ್ ತೆಗೆದು ತೊಳೆಯಿರಿ. ಇದೇ ವೇಳೆ ಮೊಶ್ಚಿರೈಸರ್ ಬಳಸಿ.

ಕೂದಲಿಗೆ ತಕ್ಷಣವೇ ಕಾಂತಿ ಹಾಗೂ ಬಣ್ಣ ನೀಡುವಲ್ಲಿ ಕಾಫಿಯು ಪ್ರಮುಖ ಪಾತ್ರ ವಹಿಸುವುದು. ಕಾಫಿಯು ತುಂಬಾ ಸುರಕ್ಷಿತ ಮತ್ತು ನೈಸರ್ಗಿಕ ಹೇರ್ ಡೈ ಎಂದು ಪರಿಗಣಿಸಲಾಗಿದೆ.

2 ಚಮಚ ಕಾಫಿ ಹರಳನ್ನು ಹಾಗೆ ಸ್ವಲ್ಪ ಕಂಡೀಷನರ್ ಗೆ ಹಾಕಿ ಮತ್ತು ಕೂದಲನ್ನು ಶಾಂಪೂವಿನಿಂದ ತೊಳೆದ ಬಳಿಕ ಇದನ್ನು ಹಚ್ಚಿಕೊಳ್ಳಿ. ಈ ಮಿಶ್ರಣವು ಅರ್ಧಗಂಟೆ ಕಾಲ ಹಾಗೆ ಇರಲಿ ಮತ್ತು ಇದರ ಬಳಿಕ ತೊಳೆಯಿರಿ.

ಕಾಫಿಯನ್ನು ಸರಿಯಾಗಿ ಕುದಿಸಿ ಅದನ್ನು ಸೋಸಿಕೊಂಡು, ತಣ್ಣಗಾದ ಬಳಿಕ ಸ್ಪ್ರೇ ಬಾಟಲಿಗೆ ಹಾಕಿ. ಇದನ್ನು ಕೂದಲಿಗೆ ಸ್ಪ್ರೇ ಮಾಡಿ. ಇದರ ಬಳಿಕ 30 ನಿಮಿಷ ಹಾಗೆ ಬಿಡಿ ಮತ್ತು ಇದರ ಬಳಿಕ ತೊಳೆಯಿರಿ.

ಚರ್ಮದಲ್ಲಿ ಸತ್ತ ಚರ್ಮದ ಅಂಗಾಂಶಗಳನ್ನು ತೆಗೆದಂತೆ, ಕೂದಲಿನಲ್ಲಿ ಇರುವಂತಹ ಸತ್ತ ಚರ್ಮದ ಅಂಗಾಂಶಗಳನ್ನು ತೆಗೆಯುವುದು ಅಗತ್ಯ. ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಂಡ ಬಳಿಕ ಅದು ಕೂದಲಿನ ಕಿರುಚೀಲಗಳನ್ನು ಹಾಗೆ ಉತ್ತೇಜಿಸುವುದು ಮತ್ತು ಅದರ ಬೆಳವಣಿಗೆಗೆ ಸಹಕಾರಿ.

ಕಾಫಿ ಬೀಜಗಳನ್ನು ರುಬ್ಬಿಕೊಳ್ಳಿ ಮತ್ತು ಅದನ್ನು ಸ್ಕ್ರಬ್ ನ ಹಾಗೆ ಕೂದಲಿಗೆ ಹಾಕಿಕೊಂಡು ಒಂದು ಅಥವಾ ಎರಡು ನಿಮಿಷ ಕಾಲ ಹಾಗೆ ಮಸಾಜ್ ಮಾಡಿ. ಇದರ ಬಳಿಕ ತೊಳೆಯಿರಿ. ಕೂದಲನ್ನು ತೊಳೆದುಕೊಂಡ ಬಳಿಕ ಸಾಮಾನ್ಯವಾಗಿ ಬಳಸುವಂತೆ ಶಾಂಪೂ ಮತ್ತು ಕಂಡೀಷನರ್ ಬಳಸಿ. ಇದರಿಂದ ತಲೆಬುರುಡೆಯು ಸರಿಯಾಗಿ ಶುಚಿಯಾಗುವುದು.

ಸಲೂನ್ ನಲ್ಲಿ ಮಾಡುವಂತಹ ಫೇಶಿಯಲ್ ನ್ನು ಮನೆಯಲ್ಲೇ ಮಾಡಬೇಕಿದ್ದರೆ ಆಗ ನೀವು ಕಾಫಿ ಫೇಸ್ ಪ್ಯಾಕ್ ಬಳಕೆ ಮಾಡಿ. ಕಾಫಿಯಿಂದ ಫೇಸ್ ಪ್ಯಾಕ್ ಮಾಡಿಕೊಂಡು ಅದನ್ನು ಬಳಕೆ ಮಾಡಿದರೆ, ಅದು ಚರ್ಮದಲ್ಲಿನ ಸತ್ತ ಚರ್ಮವನ್ನು ಕಿತ್ತು ಹಾಕುವುದು ಮತ್ತು ಚರ್ಮಕ್ಕೆ ಕಾಂತಿ ನೀಡುವುದು.

ಎರಡು ಚಮಚ ಮೊಸರು ಮತ್ತು ಒಂದು ಚಮಚ ಕಾಫಿ ಹುಡಿಯನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ತೊಳೆಯಿರಿ.

ಕಾಫಿಯು ಅದ್ಭುತವಾದ ಸುವಾಸನೆ ಹೊಂದಿದ್ದು, ಇದು ಚರ್ಮಕ್ಕೆ ಪುನಶ್ಚೇತನ ನೀಡುವುದು ಹಾಗೂ ಒತ್ತಡ ತಗ್ಗಿಸುವುದು.