ಸಂತ ಶ್ರೀ ಬಸವೇಶ್ವರರ ನೆನಪಿಗೆ ನಿರ್ಮಿಸಲಾದ ಕಲಬುರಗಿಯ ಶರಣ ಬಸವೇಶ್ವರ ದೇವಾಲಯ

18/10/2021

ಶರಣ ಬಸವೇಶ್ವರ ದೇವಾಲಯ ಕಲಬುರಗಿ  ಮಧ್ಯದಲ್ಲಿದೆ. ಈ ದೇವಸ್ಥಾನ ಸಂತ ಶ್ರೀ ಬಸವೇಶ್ವರರ ನೆನಪಿಗೆ ಹೋಲಿಸಲಾಗಿದೆ.ಈ ದೇವಸ್ಥಾನ ೨ಶತಮಾನದ ಹಿಂದೆ ಸ್ಥಾಪಿಸಲ್ಪಟ್ಟಿತು. ಇಲ್ಲಿ ನೀವು ಪಂಚಲೋಹ ಕಲಶವನ್ನು ನೋಡಬಹುದು. ಈ ದೇವಸ್ಥಾನದ ವಾಸ್ತುಕಲೆ ೧೨ನೇ ಶತಮಾನದಿಂದ ಇದೆ.

ಗರ್ಬಗ್ರಹ: ಶರಣ ಬಸವೇಶ್ವರ ಸಮಾಧಿ ಇದೆ. ದೇವಾಲಯದ ಸುತ್ತಮುತ್ತ ಬಹಳಷ್ಟು ಸ್ತಂಬಗಳಿವೆ ಮತ್ತು ಸಭಾಮಂಟಪಗಳಿವೆ. ಹಾಗೂ ಪ್ರದಕ್ಷಿಣಪಥವಿದೆ.  ಗುಡಿಯ ಸುತ್ತ ಆನೆ, ನವಿಲು, ಗಿಳಿ, ಗರುಡ, ನಾಗ ಹಾಗೂ ಹೂವಿನ ಶಿಲೆ ಶಿಲ್ಪಗಳಿವೆ. ಇದು ತುಂಬ ಸುಂದರವಾಗಿ ಕಾಣಿಸುತ್ತದೆ. ಶರಣ ಬಸವೇಶ್ವರ ವೀರಶೈವ ಮನೆತನದವರು. ಇವರ ತಾಯಿ ಸಂಗಮ್ಮ- ತಂದೆ ಮಲಕಪ್ಪ, ಇವರಿಗೆ ಶರಣ ಬಸವೇಶ್ವರನೊಂದಿಗೆ ಬಹಳ ಪ್ರೀತಿ ಹಾಗೂ ಭಕ್ತಿ ಇತ್ತು. ಇದರಿಂದ ದಾಸೋಹದ ಪಾರಂಪರ ಪ್ರಾರಂಭವಾಯಿತು. ಶರಣ ಬಸವೇಶ್ವರ ಪೂರ್ತಿ ಮನಸ್ಸದಿಂದ ಪೂಜೆ ಮಾಡುತ್ತಿದ್ದ. ಶರಣ ಬಸವೇಶ್ವರ ಮರಣದ ನಂತರ, ಅವರ ನೆನಪಿನಿಂದ ಒಂದು ಪವಿತ್ರವಾದ ದೇವಸ್ಥಾನವನ್ನು ಕಟ್ಟಿಸಿದರು. ಶರಣ ಬಸವೇಶ್ವರರ ಉತ್ಸಾಹಿತ ಭಕ್ತ “ಅಡಿ ದೊಡ್ಡಪ್ಪ ಶರಣ” ಇವರಿಬ್ಬರು ಕೂಡಿ “ಶರಣ ಬಸವೇಶ್ವರ ಮಹದಸೋಹ ಪೀಠ” ಕಟ್ಟಿಸಿದರು. ಸಂಕ್ರಾಂತಿ ಹಾಗೂ ವಿಜಯದಶಮಿ ಹುಬ್ಬ ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಶರಣ ಬಸವೇಶ್ವರ ಮಹದಸೋಹ ಜಾತ್ರೆ ಪ್ರತಿ ವರ್ಷ ಮಾರ್ಚ್ ರಿಂದ ಏಪ್ರೀಲ್ ವರೆಗೆ ಇರುತ್ತದೆ. ತೆರನ್ನು ಎಳೆಯಲಾಗುತ್ತದೆ.  ಇದು ಬಹಳ ಆಕರ್ಷಿತವಾಗಿರುತ್ತದೆ.. ಶರಣ ಬಸವೇಶ್ವರ ಮಹದಸೋಹ ಪೀಠ ತಮ್ಮ “ಶರಣ ಬಸವೇಶ್ವರ ವಿದ್ಯಾ ವರ್ಷಕ್ ಸಂಸ್ಥೆ ಇಂದ ಶಿಕ್ಷಣವನ್ನು ಕೊಡುತ್ತಾರೆ.