ಕೊಡಗು : ವಿವಿಧೆಡೆ ಉತ್ತಮ ಮಳೆ : ಮರ ಬಿದ್ದು ಸಂಚಾರ ವ್ಯತ್ಯಯ

21/10/2021

ಮಡಿಕೇರಿ ಅ.21 : ಕೊಡಗು ಜಿಲ್ಲೆಯ ವಿವಿಧೆಡೆ ಸಿಡಿಲಬ್ಬರದೊಂದಿಗೆ ಉತ್ತಮ ಮಳೆಯಾಗಿದೆ. ಬುಧವಾರ ರಾತ್ರಿ ಮತ್ತು ಗುರುವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆ ಜನರಲ್ಲಿ ಆತಂಕವನ್ನು ಸೃಷ್ಟಿಸಿತು.
ಅನಿರೀಕ್ಷಿತವಾಗಿ ಸುರಿದ ಭಾರೀ ಮಳೆಗೆ ಸೋಮವಾರಪೇಟೆ, ಮಡಿಕೇರಿ ರಾಜ್ಯ ಹೆದ್ದಾರಿಯ ಹೊಸತೋಟ ಜಂಕ್ಷನ್‌ನಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ನೆಲ್ಲಿಹುದಿಕೇರಿ, ಚೆಟ್ಟಳ್ಳಿ ಮಾರ್ಗ ಮಧ್ಯೆ ಅಭ್ಯತ್‌ಮಂಗಲದ ಬಳಿ ಗುರುವಾರ ಮಧ್ಯಾಹ್ನ ಮರ ಬಿದ್ದು ಸಂಚಾರ ವ್ಯತ್ಯಯಗೊಂಡಿತು. ಸ್ಥಳೀಯರು ಬಿದ್ದ ಮರಗಳನ್ನು ಕಡಿದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಿಡಿಲಬ್ಬರದಿಂದ ಆತಂಕ ಮನೆ ಮಾಡಿತ್ತು.