ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ

22/10/2021

ನವದೆಹಲಿ ಅ.22 : ದೇಶದಲ್ಲಿ ಶುಕ್ರವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 110 ರೂ. 61 ಪೈಸೆಯಾದರೆ, ಡೀಸೆಲ್ ದರ 101 ರೂ. 49 ಪೈಸೆಗೆ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ 106 ರೂಪಾಯಿ 89 ಪೈಸೆ ಮತ್ತು ಡೀಸೆಲ್ ಬೆಲೆ 95 ರೂಪಾಯಿ 62 ಪೈಸೆಯಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 107 ರೂಪಾಯಿ 45 ಪೈಸೆ, 98 ರೂಪಾಯಿ 73 ಪೈಸೆಯಾಗಿದೆ. ಚೆನ್ನೈಯಲ್ಲಿ ಪೆಟ್ರೋಲ್ ಬೆಲೆ 103 ರೂಪಾಯಿ 92 ಪೈಸೆ ಮತ್ತು 99 ರೂಪಾಯಿ 92 ಪೈಸೆಯಾಗಿದೆ.