ವಿಧಾನ ಪರಿಷತ್ ಚುನಾವಣೆ : ಕೊಡಗು ಬಿಜೆಪಿಯೊಂದಿಗೆ ರಾಜ್ಯ ನಾಯಕರ ಚರ್ಚೆ

22/10/2021

ಮಡಿಕೇರಿ ಅ.22 : ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯ ಬಿಜೆಪಿ ನಾಯಕರು ಕೊಡಗು ಜಿಲ್ಲಾ ಬಿಜೆಪಿ ಪ್ರಮುಖರೊಂದಿಗೆ ಚರ್ಚಿಸಿದರು.
ಮಡಿಕೇರಿ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಮಾಹಿತಿ ಸಂಗ್ರಹಿಸಿದರು.
ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚುರoಜನ್, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮತ್ತಿತರರು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸ್ಥಾನದ ಆಕಾಂಕ್ಷಿಗಳಾದ ರಾಬಿನ್ ದೇವಯ್ಯ, ಸುಜಾ ಕುಶಾಲಪ್ಪ, ಅರುಣ್ ಭೀಮಯ್ಯ, ಶಾಂತೆಯoಡ ರವಿಕುಶಾಲಪ್ಪ, ನಾಪಂಡ ರವಿಕಾಳಪ್ಪ, ಬಿ.ಬಿ.ಭಾರತೀಶ್, ರಮೇಶ್ ಹೊಳ್ಳ, ಮನುಮುತ್ತಪ್ಪ, ಡೀನ್ ಬೋಪಣ್ಣ, ಎಸ್.ಜಿ.ಮೇದಪ್ಪ, ಗಿರೀಶ್ ಗಣಪತಿ, ಸುನೀಲ್ ಸುಬ್ರಮಣಿ, ನಾಗೇಶ್ ಕುಂದಲ್ಪಾಡಿ ಚರ್ಚೆಯಲ್ಲಿ ಪಾಲ್ಗೊಂಡರು.