ಸುಂಟಿಕೊಪ್ಪ : ಸಿಡಿಲು ಬಡಿದು ಟ್ರಾನ್ಸ್ ಫಾರ್ಮರ್ ಗೆ ಹಾನಿ : ಲಕ್ಷಾಂತರ ರೂ. ನಷ್ಟ

22/10/2021

ಸುಂಟಿಕೊಪ್ಪ ಅ.22 : ಸುಂಟಿಕೊಪ್ಪ ಪಟ್ಟಣದಲ್ಲಿ ಶುಕ್ರವಾರ ಮುಂಜಾನೆ ಸಿಡಿಲು ಬಡಿದು ಕೆಪಿಟಿಸಿಎಲ್ ವಿದ್ಯುತ್ ಪ್ರಸರಣಾ ಕೇಂದ್ರದ ಟ್ರಾನ್ಸ್ ಫಾರ್ಮರ್ ಹಾನಿಗೊಂಡು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಶುಕ್ರವಾರ ಮುಂಜಾನೆ 5-15 ಗಂಟೆಯ ಸುಮಾರಿನಲ್ಲಿ ಸಿಡಿಲು ಬಡಿದು ಸುಂಟಿಕೊಪ್ಪ, ಮತ್ತಿಕಾಡು, ಕಂಬಿಬಾಣೆ, ಕೆದಕಲ್, ಹೊಸಕೋಟೆ ಹರದೂರು ಗ್ರಾಮಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು.
ಕಿರಿಯ ಅಭಿಯಂತರ ಸಂತೋಷ್, ಕುಶಾಲನಗರ ಕಿರಿಯ ಅಭಿಯಂತರ ಭರತ್, ಸುಂಟಿಕೊಪ್ಪ ಚೆಸ್ಕಾಂ ಅಭಿಯಂತರ ಜೈದೀಪ್ ಹಾಗೂ ಸಿಬ್ಬಂದಿಗಳು ತುರ್ತು ದುರಸ್ತಿ ಕಾರ್ಯ ಕೈಗೊಂಡರು.
ಸಿಡಿಲು ಬಡಿದ ಪರಿಣಾಮ ಚೆಸ್ಕಾಂಗೆ ಲಕ್ಷಾಂತರ ರೂ. ನಷ್ಟವುಂಟಾಗಿದೆ ಎಂದು ಅಭಿಯಂತರರು ತಿಳಿಸಿದರು.