ಕೆಪಿಸಿಸಿ ಪ್ರಮುಖರೊಂದಿಗೆ ಟಿ.ಪಿ.ರಮೇಶ್ ಸಮಾಲೋಚನೆ

22/10/2021

ಮಡಿಕೇರಿ ಅ.22 : ಹಾನಗಲ್ಲು ವಿಧಾನಸಭಾ ಕ್ಷೇತ್ರದ ನೆರೆಗಲ್ಲು ಗ್ರಾಮದಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ವೀಕ್ಷಕ ಟಿ.ಪಿ.ರಮೇಶ್, ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಹ್ಯಾರಿಸ್ ಹಾಗೂ ಮುಖಂಡ ಬಶೀರ್ ಎಡಪಾಲ ಅವರುಗಳು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಅಲ್ಲದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರನ್ನು ಭೇಟಿಯಾದ ಪ್ರಮುಖರು ಪಕ್ಷ ಸಂಘಟನೆ ಕುರಿತು ಚರ್ಚಿಸಿದರು.