ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾಗಿ ಪ್ರವೀಣ್ ಭೀಮಯ್ಯ ನೇಮಕ

26/10/2021

ಮಡಿಕೇರಿ ಅ.26 : ಭಾರತೀಯ ಕಿಸಾನ್ ಸಂಘದ ಕೊಡಗು ಜಿಲ್ಲಾಧ್ಯಕ್ಷರಾಗಿ ಮುಕ್ಕಾಟ್ಟೀರ ಪ್ರವೀಣ್ ಭೀಮಯ್ಯ ಹಾಗೂ ಕಾರ್ಯದರ್ಶಿಯಾಗಿ ಅರುಣ್ ರೈ ನೇಮಕಗೊಂಡಿದ್ದಾರೆ.
ನಗರದಲ್ಲಿ ಪ್ರಾಂತ ಭಾರತೀಯ ಕಿಸಾನ್ ಸಂಘದ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸಭೆಯಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.
ಸಮಿತಿಯ ಸದಸ್ಯರಾಗಿ ಗೋಪಿ ಚಿಣ್ಣಪ್ಪ, ಕೊಲ್ಲೀರ ಧರ್ಮಜ, ಕೂತಿ ಪರಮೇಶ್, ರಾಜಾದೇವಯ್ಯ, ಕಡೇಮಾಡ ನಾಣಯ್ಯ, ಎಚ್.ಆರ್. ಜಿತೇಂದ್ರ, ಜಯಪ್ರಕಾಶ್ ಪೈ ಆಯ್ಕೆಯಾದರು.
::: ಸಮಸ್ಯೆಗಳ ಕುರಿತು ಚರ್ಚೆ :::
ಕೃಷಿಕರ ವಿದ್ಯುತ್ ಸಮಸ್ಯೆ, ಕಂದಾಯ ಇಲಾಖೆಯಲ್ಲಿ ಕಡತ ವಿಲೇವಾರಿ ಸಮಸ್ಯೆ, ಮಾನವ ಕಾಡುಪ್ರಾಣಿ ಸಮಸ್ಯೆ, ರೈತರ ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ, ಮಳೆ ಹಾನಿ ಪರಿಹಾರ ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಕಿಶಾನ್ ಸಂಘದ ನೂತನ ಅಧ್ಯಕ್ಷ ಮುಕ್ಕಾಟ್ಟೀರ ಪ್ರವೀಣ್ ಭೀಮಯ್ಯ ಮಾತನಾಡಿ, ಕೊಡಗಿನ ಮುಖ್ಯ ಬೆಳೆಗಳಾದ ಕಾಫಿ, ಕರಿಮೆಣಸು, ಅಡಿಕೆ, ಭತ್ತ ಮುಂತಾದ ಬೆಳೆಗಳಿಗೆ ಲಾಭದಾಯಕ ದರ ಸಿಗುವಂತೆ ಸಂಘದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಕಂದಾಯ ದಾಖಲಾತಿಗಳು ಸರಿಯಾದ ಸಮಯಕ್ಕೆ ರೈತರಿಗೆ ಸಿಗುವಂತೆ ನೋಡಿಕೊಳ್ಳಲಾಗುವುದು, ವಿದ್ಯುತ್ ಸಮಸ್ಯೆ, ಕಾಡು ಪ್ರಾಣಿ-ಮಾನವ ಸಂಘರ್ಷಕ್ಕೆ ಸಂಬAಧಿಸಿದAತೆ ಇಲಾಖೆಗಳ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಪ್ರಮುಖರಾದ ಕಡೇಮಾಡ ನಂದನಾಣಯ್ಯ, ಕಟ್ಟೇರ ಈಶ್ವರ, ತೋರಿರ ವಿನು, ಕಾಟಿಮಾಡ ಶರೀನ್ ಮತ್ತಿತರರು ಸಭೆಯಲ್ಲಿ ಉಪಸ್ಥಿರಿದ್ದರು.