ಅ.31 ರಂದು “ಅಮರ ಸುಳ್ಯ-1837” ಪುಸ್ತಕ ಬಿಡುಗಡೆ

27/10/2021

ಮಡಿಕೇರಿ ಅ.27 : ವಕೀಲ ವಿದ್ಯಾಧರ್ ಕುಡೆಕಲ್ ರಚಿಸಿರುವ “ಅಮರ ಸುಳ್ಯ-1837” (ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ) ಪುಸ್ತಕ ಅ.31 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣದ ಅಂಬಟೆಡ್ಕದಲ್ಲಿರುವ ಸಾಹಿತ್ಯ ಪರಿಷತ್ತಿನ “ಕನ್ನಡ ಭವನ”ದಲ್ಲಿ ಬೆಳಗ್ಗೆ 10.30 ಗಂಟೆಗೆ ಬಿಡುಗಡೆಗೊಳ್ಳಲಿದೆ.
ಭಾಷಾ ವಿದ್ವಾಂಸ ಮತ್ತು ಸಾಹಿತಿ ಕೋಡಿ ಕುಶಾಲಪ್ಪ ಗೌಡ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಈ ಕೃತಿಗೆ ನಾಡಿನ ಪ್ರಸಿದ್ಧ ಕಲಾವಿದ ಜಾನ್ ದೇವರಾಜ್ ಚಿತ್ರ ರಚಿಸಿ ಮುಖಪುಟ ವಿನ್ಯಾಸ ಮಾಡಿದ್ದಾರೆ. ಪ್ರಖ್ಯಾತ ಇತಿಹಾಸಕಾರರಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಮುಖ್ಯಸ್ಥ ಡಾI ತಂಬAಡ ವಿಜಯ್ ಪೂಣಚ್ಚ ಮುನ್ನುಡಿಯನ್ನು ಬರೆದಿದ್ದಾರೆ.
ಮಡಿಕೇರಿಯ ಕೋಟೆ ಆವರಣದಲ್ಲಿ ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟದ ಪ್ರಮುಖ ನಾಯಕ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಬ್ರಿಟಿಷರು 1837 ಅ.31 ರಂದು ಗಲ್ಲಿಗೇರಿಸಿದ್ದರು.