ಕೊಡಗು : ಜಿಲ್ಲಾ ಪಂಚಾಯಿತಿಯಲ್ಲಿ ಕನ್ನಡ ಕಂಪು: ಸಿಬ್ಬಂದಿಗಳಿಂದ ಗೀತ ಗಾಯನ

28/10/2021

ಮಡಿಕೇರಿ ಅ.28: ನಗರದ ಜಿಲ್ಲಾಪಂಚಾಯತ್ ಭವನದಲ್ಲಿ  ಕನ್ನಡ ರಾಜ್ಯೋತ್ಸವದ ಅಂಗವಾಗಿ ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು.
ಸರ್ಕಾರದ ಆದೇಶದಂತೆ ಜಿ.ಪಂ. ಸಭಾಂಗಣದಲ್ಲಿ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಜಿ.ಪಂ.ಉಪಕಾರ್ಯದರ್ಶಿ ಲಕ್ಷಿ ಪಿ. ಅವರ ನೇತೃತ್ವದಲ್ಲಿ ನಾಡಗೀತೆ, ಜೋಗದ ಸಿರಿ ಬೆಳಗಿನಲ್ಲಿ, ಬಾರಿಸು ಕನ್ನಡ ಡಿಂಡಿಮವ ಮತ್ತು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಲಾಯಿತು.
ಈ ಸಂದರ್ಭ ಜಿಲ್ಲಾಪಂಚಾಯಿತಿಯ ವಿವಿಧ ಅಧಿಕಾರಿ ಮತ್ತು ಸಿಬ್ಬಂದಿಗಳು ಕೆಂಪು ಮತ್ತು ಹಳದಿ ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದರು.